ಕುಶಾಲನಗರ ಡಿ.13: ಕೂಡಿಗೆ ಶ್ರೀ ಸತ್ಯನಾರಾಯಣ ವೃತ ಆಚರಣಾ ಸಮಿತಿಯ ವತಿಯಿಂದ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದ ಆವರಣದಲ್ಲಿ ಕಾರ್ತಿಕ ಮಾಸದ ಲಕ್ಷ ದೀಪೋತ್ಸವದ ಅಂಗವಾಗಿ ದೀಪೋತ್ಸವ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಕೂಡಿಗೆಯ ಕುಶಾಲನಗರ ಟಾಟಾ ಕಾಫಿ ವರ್ಕ್ಸನ ವ್ಯವಸ್ಥಾಪಕ ರೋಷನ್ ಸೋಮಯ್ಯ, ಗ್ರಾಯಿತ್ರಿ ಸೋಮಯ್ಯ ದೀಪ ಹಚ್ಚುವುದರ ಮೂಲಕ ಚಾಲನೆ ನೀಡಿದರು.
ದೀಪೋತ್ಸವದ ಅಂಗವಾಗಿ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜಾ ಕೈಂಕರ್ಯಗಳು, ಸೇರಿದಂತೆ ಅಭಿಷೇಕಗಳು ನಡೆದವು ಸಂಜೆ ಮಹಾಮಂಗಳಾತಿ ನಂತರ ಪ್ರಸಾದ ವಿನಿಯೋಗ ನಡೆಯಿತು. ದೀಪೋತ್ಸವ ಕಾರ್ಯಕ್ರಮಕ್ಕೆ ಕೂಡಿಗೆ, ಕೂಡುಮಂಗಳೂರು , ಕೂಡ್ಲೂರು, ಮದಲಾಪುರ, ಹಾರಂಗಿ, ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಅನೇಕ ಭಕ್ತರು ಭಾಗವಹಿಸಿದರು.
ಈ ಸಂದರ್ಭದಲ್ಲಿ ಟಾಟಾ ಕಾಫಿ ವರ್ಕ್ಸ್ ನ ಅಧಿಕಾರಿಗಳಾದ ಮಂದಣ್ಣ, ನವೀನ್, ಸಂಮತ್ ರೈ, ಸತ್ಯನಾರಾಯಣ ಸಮಿತಿಯ ಅಧ್ಯಕ್ಷ ಪ್ರಮೋದ್ , ಕಾರ್ಯದರ್ಶಿ ಭೋಪಣ್ಣ,ಸೇರಿದಂತೆ ಸಮಿತಿಯ ಸದಸ್ಯರು ಹಾಜರಿದ್ದರು.
Back to top button
error: Content is protected !!