ಕುಶಾಲನಗರ ಜು 30: ಬಾರವಿ ಕಾವೇರಿ ಕನ್ನಡ ಸಂಘದ ವತಿಯಿಂದ ಆಷಾಢ ಹುಣ್ಣಿಮೆ ಅಂಗವಾಗಿ ಕೊಡಗು-ಮೈಸೂರು ಗಡಿ ಸೇತುವೆ ಬಳಿಯ ಕಾವೇರಿ ಕ್ಷೇತ್ರದಲ್ಲಿ 161ನೇ ಹುಣ್ಣಿಮೆ ಪೂಜಾ ಕೈಂಕರ್ಯ ಜರುಗಿತು.
ಅರ್ಚಕ ಪುರುಷೋತ್ತಮ ಭಟ್ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಕಾವೇರಿ ಮಾತೆಗೆ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಿ
ಮಹಾಮಂಗಳಾರತಿ ಬಳಿಕ ನೆರೆದಿದ್ದ ಭಕ್ತರಿಗೆ ಪ್ರಸಾದ, ಅನ್ನಸಂತರ್ಪಣೆ ನೆರವೇರಿಸಲಾಯಿತು. ಉತ್ತಮ ಮಳೆ ಬೆಳೆ, ನಾಡಿನ ಸಮೃದ್ದಿಗಾಗಿ ಪ್ರಾರ್ಥಿಸಲಾಯಿತು.
ವಿರಾಜಪೇಟೆಯ ಪಿ.ಕೆ.ದೇವಯ್ಯ, ಜಾನಕಿ ದೇವಯ್ಯ ದಂಪತಿಗಳು, ಮುತ್ತಿನ ಮುಳ್ಳುಸೋಗೆ ಇಂದಿರಮ್ಮ ಸೋಮಾಚಾರ್ ಅವರು ದಿನದ ಪೂಜಾ ಸೇವಾರ್ಥ ನೆರವೇರಿಸಿದರು.
ಈ ಸಂದರ್ಭ ಎಸ್.ಎಲ್.ಎನ್ ಸಂಸ್ಥೆಉ ವೆಂಕಟಾಚಲಂ, ಪೂಜಾ ಸೇವಾರ್ಥದಾರ ಪಿ.ಡಿ.ಯತೀಶ್ ಮಾತನಾಡಿ, ಪ್ರತಿ ತಿಂಗಳು ಆರತಿ ಕ್ಷೇತ್ರ ಹೆಚ್ಚಿನ ಪ್ರಸಿದ್ದಿ ಪಡೆಯುತ್ತಿದೆ. ಕೊಡಗು ಗಡಿಯಲ್ಲಿನ ಈ ಕ್ಷೇತ್ರ ಹೆಚ್ಚಿನ ಭಕ್ತರ ಗಮನ ಸೆಳೆಯುತ್ತಿದೆ. ಕಾವೇರಿ ಮಾತೆ ಎಲ್ಲರಿಗೂ ಸಮೃದ್ದಿ ಕರುಣಿಸಲಿ ಎಂದರು.
ಸತೀಶ್ ತಂಡದಿಂದ ವಾದ್ಯಗೋಷ್ಠಿ ನಡೆಯಿತು.
ಪೂಜಾ ಕಾರ್ಯಕ್ರಮದಲ್ಲಿ
ಬಾರವಿ ಕಾವೇರಿ ಕನ್ನಡ ಸಂಘದ ರವೀಂದ್ರ ಪ್ರಸಾದ್, ಬಬೀಂದ್ರ ಪ್ರಸಾದ್, ವಿಜಯೇಂದ್ರ ಪ್ರಸಾದ್, ಇ.ಟಿ.ಚಂದ್ರು, ರಾಜರಾಜೇಶ್ವರಿ ಚಂದ್ರು, ತಿಲಕ್ ಪೂಜಾರಿ, ಕಾವೇರಿಮಣಿ, ರುದ್ರೇಶ್, ವೆಂಕಪ್ಪ, ದೇವರಾಜು, ರವಿ, ಮಹಾತ್ಮಾ, ಶಂಕರ್ ಕೊಪ್ಪ ಮತ್ತಿತರರು ಇದ್ದರು.
Back to top button
error: Content is protected !!