ಕುಶಾಲನಗರ, ಮೇ 14: ಕುಶಾಲನಗರ ತಾಲೂಕಿನ ಕಣಿವೆ ಬಳಿಯಿರುವ ಹಾರಂಗಿ ನಾಲೆ ಬಳಿ ಯುವಕನ ಮೃತದೇಹ ಪತ್ತೆಯಾಗಿದೆ.
ಮೂಲತಃ ಮಡಿಕೇರಿಯವರಾದ ಪ್ರಸ್ತುತ ಸುಳ್ಯದಲ್ಲಿ ನೆಲೆಸಿರುವ ಕಣ್ಣಂಡ ರಾಮು ಅವರ ಪುತ್ರ ಬೆಳ್ಯಪ್ಪ (28) ಅವರ ಮೃತದೇಹ ಎಂದು ತಿಳಿದುಬಂದಿದೆ.
ಅವಿವಾಹಿತ ಬೆಳ್ಯಪ್ಪ ಏಷಿಯನ್ ಪೈಂಟ್ಸ್ ಕೊಡಗು ಜಿಲ್ಲಾ ವ್ಯವಸ್ಥಾಪಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ. ಮೇಲ್ನೋಟಕ್ಕೆ ವಿಷ ಸೇವಿಸಿರುವ ಶಂಕೆ ವ್ಯಕ್ತಗೊಂಡಿದೆ.
ಮೃತನ ತಂದೆ ರಾಮು ನೀಡಿದ ದೂರಿನ ಅನ್ವಯ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮರಣೋತ್ತರ ಪರೀಕ್ಷೆ ಬಳಿಕ ಸಾವಿಗೆ ಕಾರಣ ತಿಳಿದುಬರಲಿದೆ.
ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Back to top button
error: Content is protected !!