ಕುಶಾಲನಗರ, ಏ 06: ಕೊಡಗಿನ ತಡಿಯಂಡಮೋಳ್ ಟ್ರಕ್ಕಿಂಗ್ ತೆರಳಿ ನಾಪತ್ತೆಯಾಗಿದ್ದ ಶರಣ್ಯ ತೀವ್ರ ಶೋಧ ಕಾರ್ಯ ಬಳಿಕ ಪತ್ತೆಯಾದ ನಂತರ ಹಲವರಲ್ಲಿ ಹಲವು ಸಂಶಯಗಳು ಮೂಡಿದ್ದು ಕೊಡಗು ಮಾತ್ರವಲ್ಲದೆ ನೆರೆಯ ಕೇರಳದಲ್ಲೂ ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಮೂರು ರಾತ್ರಿ ಕಾಡಿನಲ್ಲಿ ಕಳೆದಿದ್ದೇನೆ ಎನ್ನುವ ಶರಣ್ಯಾಳ ಹಾವಾಭಾವ, ಉಡುಗೆ ತೊಡುಗೆ ಸಂಶಯಕ್ಕೆ ಎಡೆಮಾಡಿದೆ. ಆಹಾರವಿಲ್ಲದೆ ಕಾಡಿನಲ್ಲಿ ಕಳೆದ ಆತಂಕ, ಬಳಲಿಕೆ ಮುಖದಲ್ಲಿಲ್ಲ, ಟ್ರಕ್ಕಿಂಗ್ ಅನುಭವ ಹೊಂದಿರುವ ಈ ಮಹಿಳೆ ಕನಿಷ್ಠ ಅಗತ್ಯ ಮುಂಜಾಗ್ರತಾ ಸಾಧನಗಳನ್ನು ಕೊಂಡೊಯ್ಯದಿರುವುದು, ರಸ್ತೆ ಪತ್ತೆಹಚ್ಚಲು ಪ್ರಯತ್ನವನ್ನೇ ಮಾಡಿಲ್ಲವಾ ಎಂಬಿತ್ಯಾದಿ ಸಂಶಯಗಳು ಚರ್ಚೆಗೆ ಒಳಪಟ್ಟಿವೆ. ಡ್ರೋನ್ ಗಳು, ಶ್ವಾನದಳ ದಿಂದಲೂ ಕೂಡ ಪತ್ತೆಹಚ್ಚಲು ಸಾಧ್ಯವಾಗದ ರೀತಿಯಲ್ಲಿ ಕಣ್ಮರೆಯಾದ ಪರಿ ಚರ್ಚೆಗೆ ಎಡೆಮಾಡಿದೆ. ಟ್ರಕ್ಕಿಂಗ್ ಪ್ರಿಯರು, ಪಕ್ಷಿತಜ್ಞರ ಶರಣ್ಯ ಕಣ್ಮರೆ ಪ್ರಕರಣದ ಬಗ್ಗೆ ಹಲವು ಕುತೂಹಲಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
Back to top button
error: Content is protected !!