ಕುಶಾಲನಗರ, ಆ 25: ಕುಶಾಲನಗರದ ತಾವರೆಕರೆ ಬಳಿಯ ಒಕೆಬಿ ಆರ್ಕೆಡ್ ನಿಂದ ಹೊರಸೂಸುವ ತ್ಯಾಜ್ಯ ಮಲಿನ ನೀರು ನಿರ್ವಹಣೆಗೆ ಸೂಕ್ತ ಕ್ರಮವಹಿಸದ ಕಾರಣ ಕಾಂಪ್ಲೆಕ್ಸ್ ನಲ್ಲಿದ್ದ ರೆಸ್ಟಾರೆಂಟ್ ಮುಚ್ಚಲು ಪುರಸಭೆ ಅಧಿಕಾರಿಗಳು ಸೂಚಿಸಿದ್ದಾರೆ.
ಅನುದೀಪ್ ಎಂಬವರು ಇದೇ ಕಾಂಪ್ಲೆಕ್ಸ್ ನಲ್ಲಿರುವ ಉಡುಪಿ ರೆಸ್ಟಾರೆಂಟ್ ನಿಂದ ಜೊಮಾಟೊ ಮೂಲಕ ಎರಡು ಪನೀರ್ ಬಟರ್ ಮಾಸಲೆ ದೋಸೆಗೆ ಆರ್ಡರ್ ನೀಡಿದ್ದಾರೆ. ಪನೀರ್ ದೋಸೆಗೆ ಬದಲು ಎರಡು ತುಂಡು ಮಸಾಲೆ ದೋಸೆ ಕಳಿಸಲಾಗಿದೆ, ದುಬಾರಿ ಮೊತ್ತ ಪಡೆದುಕೊಳ್ಳಲಾಗಿದೆ ಎಂದು ಆರೋಪಿಸಿ ನೀಡಿದ ದೂರಿನನ್ವಯ ಪುರಸಭೆ ಆರೋಗ್ಯ ನಿರೀಕ್ಷಕ ಉದಯ್ ಕುಮಾರ್, ತಾಲೂಕು ಆಹಾರ ನಿರೀಕ್ಷಕಿ ಸ್ವಾತಿ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭ ವೇಸ್ಟ್ ವಾಟರ್ ಮೇನೇಜ್ ಮೆಂಟ್ ಗೆ ಸೂಕ್ತ ಕ್ರಮವಹಿಸದ ಕಾರಣ ಈಗಾಗಲೆ ಸದರಿ ಕಟ್ಟಡಕ್ಕೆ ಲೈಸೆನ್ಸ್ ನವೀಕರಣಕ್ಕೆ ಅವಕಾಶ ನೀಡಿರಲಿಲ್ಲ. ಇದರಿಂದಾಗಿ ಕೂಡಲೆ ಕಾಂಪ್ಲೆಕ್ಸ್ ಬಂದ್ ಮಾಡುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.
ವೇಸ್ಟ್ ವಾಟರ್ ಟ್ರೀಟ್‌ಮೆಂಟ್ ಗೆ ಸೂಕ್ತ ಕ್ರಮವಹಿಸಿದ ನಂತರ ಹೋಟೆಲ್ ಮತ್ತಿತರ ಚಟುವಟಿಕೆ ಆರಂಭಿಸಲು ಸೂಚಿಸಲಾಗಿದೆ ಎಂದು ಉದಯ್ ಕುಮಾರ್ ತಿಳಿಸಿದ್ದಾರೆ.
ಈ ಸಂದರ್ಭ ಪುರಸಭೆ ದಫೇದಾರ್ ಕುಮಾರ್, ಗ್ರಾಹಕ ಅನುದೀಪ್, ಸುಮನ್, ಅನಂತ್ ಇದ್ದರು.
Back to top button
error: Content is protected !!