ಕುಶಾಲನಗರ, ಅ 11: ಕೂಡಿಗೆ ಗ್ರಾಪಂ ವ್ಯಾಪ್ತಿಯ ಬ್ಯಾಡಗೊಟ್ಟದಲ್ಲಿರುವ ದಿಡ್ಡಳ್ಳಿ ನಿರಾಶ್ರಿತರ ಪುನರ್ವಸತಿ ಶಿಬಿರದಲ್ಲಿ ಕೂಡಿಗೆ ಗ್ರಾಪಂ ವತಿಯಿಂದ ಸ್ವಚ್ಚತಾ ಕಾರ್ಯ ನಡೆಯಿತು.
ಗ್ರಾಪಂ ವತಿಯಿಂದ ಶಿಬಿರವನ್ನು ನಿರ್ಲಕ್ಷಿಸಲಾಗಿದ್ದು ಯಾವುದೇ ರೀತಿಯ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂಬುದು ಶಿಬಿರದ ನಿವಾಸಿಗಳ ಆರೋಪವಾಗಿತ್ತು. ಈ ಹಿನ್ನಲೆಯಲ್ಲಿ ಗ್ರಾಪಂ ಮುಂದೆ ಪ್ರತಿಔಟನೆ ನಡೆಸಲು ಕೂಡ ಸಜ್ಜಾಗಿದ್ದರು.
ಈ ಹಿನ್ನಲೆಯಲ್ಲಿ ಗ್ರಾಪಂ ಪಿಡಿಒ ಮಂಜುಳಾ ಅವರು ಖುದ್ದು ಶಿಬಿರಕ್ಕೆ ಭೇಟಿ ನೀಡಿ ಪರಿಶೀಲಿಸಿ ಜೆಸಿಬಿ ಮೂಲಕ ಕಾಡು ಗಿಡಗಳನ್ನು ತೆರವು ಗೊಳಿಸಿ, ಚರಂಡಿ ಸ್ವಚ್ಚತಾ ಕಾರ್ಯಗಳಿಗೆ ಚಾಲನೆ ನೀಡಿದ್ದಾರೆ.
Back to top button
error: Content is protected !!