ಸಭೆ
ಹೆಬ್ಬಾಲೆ ನಂ 38192ನೇ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಮಹಾಸಭೆ

ಕುಶಾಲನಗರ, ಸೆ 23:
ಹೆಬ್ಬಾಲೆಯ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸಂಘದ ಉಪಾಧ್ಯಕ್ಷ ಹೆಚ್.ಆರ್.ಮಣಿಕಂಠ ಅವರ ಅಧ್ಯಕ್ಷತೆಯಲ್ಲಿ ಬನಶಂಕರಿ ಸಭಾಂಗಣ ಆವರಣದಲ್ಲಿ ನಡೆಯಿತು
ಸಂಘದ ಹಳೆಯ ಕಟ್ಟಡ ಗ್ರಾಮ ಪಂಚಾಯತಿ ಸಮೀಪದಲ್ಲಿದ್ದು ಆ ಜಾಗಕ್ಕೆ ಗ್ರಾಮ ಪಂಚಾಯತಿ ಮೂಲಕ ಬೇಲಿ ಅಳವಡಿಸಿರುವ ಹಿನ್ನೆಲೆಯಲ್ಲಿ ಅದನ್ನು ತೆರವುಗೊಳಿಸುವಂತೆ ಸಭೆಯಲ್ಲಿ ಹಾಜರಿದ್ದ ಹಲವು ಸದಸ್ಯರು ಒತ್ತಾಯಿಸಿದರು. ಸಂಘದ ಮೂಲಕ ಕಾನೂನು ರೀತಿಯಲ್ಲಿ ಹೋರಾಟ ಮಾಡಲು ಸಲಹೆ ನೀಡಿದರು.
ಮುಂದಿನ ತಿಂಗಳು ನಡೆಯುವ ಆಡಳಿತ ಮಂಡಳಿಯ ಚುನಾವಣೆ ಸಂದರ್ಭದಲ್ಲಿ ಮತ ಚಲಾಯಿಸಲು ಕೆಲವರು ಅನ್ಯ ಮಾರ್ಗ ಹಿಡಿದಿರುವ
ವಿಷಯದ ಬಗ್ಗೆ ತೀವ್ರ ಚರ್ಚೆ ನಡೆಯಿತು. 2022-23 ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಸಂಬಂಧಿಸಿದಂತೆ ಹಾಗೂ ಹಳೆ ಬೆಂಕಿ ಪಟ್ಟಣ ಕಾರ್ಖಾನೆಯ ಜಾಗವನ್ನು ಅಭಿವೃದ್ಧಿ ಪಡಿಸುವ ಬಗ್ಗೆ,
ರೈತರಿಗೆ ನೀಡುವ ಕೆಸಿಸಿ ಸಾಲ ಮತ್ತು ಮರು ವಸೂಲಾತಿಯ ಬಗ್ಗೆ ಚರ್ಚೆಗಳು ನಡೆದವು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಉಪಾಧ್ಯಕ್ಷ ಹೆಚ್.ಆರ್. ಮಣಿಕಂಠ ಮಾತನಾಡಿ, ಸಂಘವು ಈ ಸಾಲಿನಲ್ಲಿ ಎಲ್ಲಾ ವ್ಯವಹಾರ ವಹಿವಾಟುಗಳನ್ನು ನಡೆಸಿ ಈ ಸಾಲಿನಲ್ಲಿ 5 ಲಕ್ಷ 19 ಸಾವಿರದ 178 ರೂಗಳ ನಿವ್ವಳ ಲಾಭವನ್ನು ಗಳಿಸಿದೆ ಎಂದು ತಿಳಿಸಿದರು.
ಸಂಘದ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಹೆಚ್.ಎನ್. ಗಿರೀಶ್, ವಾಚಿಸಿದರು.
ಈ ಸಂದರ್ಭ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನದ ರೂಪದಲ್ಲಿ ಬಹುಮಾನವನ್ನು ನೀಡಲಾಯಿತು.
ಮಹಾ ಸಭೆಯಲ್ಲಿ ಸಂಘದ ನಿರ್ದೇಶಕರಾದ ಹೆಚ್.ಸಿ. ಜಲೇಂದ್ರ, ಹೆಚ್.ಟಿ.ದಿನೇಶ್, ಹೆಚ್.ಕೆ.ಕವಿತಾ, ಎಂ.ಎಂ. ಮಹದೇವ, ಹೆಚ್.ಎನ್. ಮಹದೇವ, ಹೆಚ್.ಜೆ.ಪರಮೇಶ, ಹೆಚ್.ಟಿ.ಮೋಹನ್, ಹೆಚ್.ಎಲ್. ರವಿಚಂದ್ರ, ಎಂ.ಎಸ್. ಶಶಿಕಲಾ ಹೆಚ್.ಜೆ. ಸ್ವಾಮಿ, ಹೆಚ್. ವಿ.ಸೋಮಶೇಖರ್, ಸಹಕಾರ ಸಂಘದ ಮೇಲ್ವಿಚಾರಕ ತುಂಗರಾಜ್, ಎಂ.ಕೆ. ಗೀತಾ ಸೇರಿದಂತೆ ಅಧಿಕಾರಿ ವರ್ಗದವರು ಹಾಜರಿದ್ದರು.



