ಮನವಿ

ಮಲ್ಲೇನಹಳ್ಳಿ ಗ್ರಾಮದಲ್ಲಿ ಸೋಪಾನ ಕಟ್ಟೆ ನಿರ್ಮಾಣಕ್ಕೆ ಗ್ರಾಮಸ್ಥರ ಅಗ್ರಹ

ಕುಶಾಲನಗರ ಆ 12: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಲ್ಲೇನಹಳ್ಳಿ ಗ್ರಾಮದ ಸಮೀಪದಲ್ಲಿ ಹರಿಯುತ್ತಿರುವ ಹಾರಂಗಿ ನದಿಯ ದಂಡೆಯ ಸಮೀಪದಲ್ಲಿ ಈ ವ್ಯಾಪ್ತಿಯ ಮಲ್ಲೇನಹಳ್ಳಿ, ಸೀಗೆಹೊಸೂರು ಭುವನಗಿರಿ ಗ್ರಾಮಗಳ ರೈತರಿಗೆ ಅನುಕೂಲವಾಗುವಂತೆ ನೀರಾವರಿ ಸೌಕರ್ಯ ಒದಗಿಸುವ ಹೊಸ ಯೋಜನೆಯ ಅಡಿಯಲ್ಲಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಕಟ್ಟಡಗಳ ನಿರ್ಮಾಣ, ಮತ್ತು ಕಾಲುವೆಗಳ ಕಾಮಗಾರಿಗಳು ನಡೆಯುತ್ತಿವೆ , ಈ ಕಾಮಗಾರಿಯು ನಡೆಯುವ ಸಂದರ್ಭದಲ್ಲಿ ನದಿಗೆ ಸಾರ್ವಜನಿಕರು ,ಗ್ರಾಮಸ್ಥರು ಹೋಗುವ ಪ್ರಮುಖ ದಾರಿಯಲ್ಲಿ ಕಾಮಗಾರಿಯು ನಡೆಯುತ್ತಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರಿಗೆ ಅನುಕೂಲವಾಗುವಂತೆ ಸೋಪಾನಕಟ್ಟೆಯನ್ನು ನಿರ್ಮಿಸುವಂತೆ ಈ ವ್ಯಾಪ್ತಿಯ ಗ್ರಾಮಸ್ಥರ ಅಗ್ರಹವಾಗಿದೆ.
ಮಲ್ಲೇನಹಳ್ಳಿ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯ ಮೂಲಕ ಹಾರಂಗಿ ನದಿಯಿಂದ ಬೃಹತ್ ಪ್ರಮಾಣದ ಯಂತ್ರಗಳ ಅಳವಡಿಕೆ ಮೂಲಕ ನೀರು ಎತ್ತುವಿಕೆ ಮಾಡಿ ಅಲ್ಲಿಂದ ನೀರನ್ನು ನೆಲ ಟ್ಯಾಂಕ್ ನಲ್ಲಿ ಸಂಗ್ರಹಿಸಿ ಅದರ ಮೂಲಕ ಉಪ ಕಾಲುವೆಗಳ ಮುಖೇನ ರೈತರ ಜಮೀನಿಗೆ ನೀರು ಹರಿಯುವ ಯೋಜನೆಯು ಇದ್ದಾಗಿದೆ ,ಈ ಕಾಮಗಾರಿಗಳ ನಿರ್ಮಾಣದ ಸಂದರ್ಭದಲ್ಲಿ ಹಾರಂಗಿ ನದಿಗೆ ತೆರಳುವ ರಸ್ತೆ, ಮತ್ತು ಸೋಪಾನ ಕಟ್ಟೆಯು ಹಾಳಾಗಿರುವ ಹಿನ್ನೆಲೆಯಲ್ಲಿ ನದಿಗೆ ಈ ವ್ಯಾಪ್ತಿಯ ಮಹಿಳೆಯರು, ಬಟ್ಟೆಗಳನ್ನು ತೊಳೆಯಲು ಹೋಗಲು, ವಿವಿಧ ಪೂಜಾ ಕಾರ್ಯಕ್ರಮಗಳಿಗೆ ತೆರಳಲು ಹೊಸದಾಗಿ ನಿರ್ಮಿಸುವಂತೆ ಗ್ರಾಮಸ್ಥರ ಒತ್ತಾಯವಾಗಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!