ಕುಶಾಲನಗರ, ಏ 09: ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಅವರಿಗೆ ಸಚಿವ ಸ್ಥಾನ ನೀಡುವಂತೆ ಸುಂದರನಗರ ಕೋರೆ ರಸ್ತೆ ವ್ಯಾಪ್ತಿಯ ಹಕ್ಕುಪತ್ರ ವಂಚಿತರ ಹೋರಾಟ ಸಮಿತಿ ಹಾಗೂ ದಲಿತ ಸಂಘರ್ಷ ಸಮಿತಿ ಭೀಮಘರ್ಜನೆ ವತಿಯಿಂದ ಆಗ್ರಹಿಸಲಾಯಿತು.
ಸುಂದರನಗರ ವೃತ್ತದಲ್ಲಿ ಜಮಾಯಿಸಿದ ಸಮಿತಿ ಕಾರ್ಯಕರ್ತರು ಹಾಗೂ ಹೋರಾಟ ಸಮಿತಿ ಸದಸ್ಯರು ಮಂತರ್ ಗೌಡ ಪರವಾಗಿ ಘೋಷಣೆಗಳನ್ನು ಮೊಳಗಿಸಿದರು. ನೂತನ ಸಂಪುಟದಲ್ಲಿ ಮಂತರ್ ಗೌಡ ಅವರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯಿಸಿ ಜಯಕಾರ ಕೂಗಿದರು.
ಈ ಸಂದರ್ಭ ಮಾತನಾಡಿ ಡಿಎಸ್ಎಸ್ ಭೀಮಘರ್ಜನೆ
ಜಿಲ್ಲಾಧ್ಯಕ್ಷ ಎಲ್.ಎಂ.ನಾಗರಾಜ್ ಹಾಗೂ ಹೋರಾಟ ಸಮಿತಿಯ ಸದಸ್ಯೆ ರಶಿಕಲಾ, ಕಳೆದ ಮೂರು ವರ್ಷಗಳ ಕಾಲ ಶಾಸಕರು ಕ್ಷೇತ್ರದಲ್ಲಿ ಅತ್ಯುತ್ತಮವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಡವರ ಪರ ಕಾಳಜಿ ಹೊಂದಿರುವ ಮಂತರ್ ಗೌಡ ಅವರಿಗೆ ಮಂತ್ರಿ ಸ್ಥಾನ ದೊರೆಯಬೇಕು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನೂತನ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕು. ಶಾಸಕರು ಮಂತ್ರಿಯಾದಲ್ಲಿ ನಮ್ಮ ಹಕ್ಕುಪತ್ರ ಹೋರಾಟಕ್ಕೆ ಶೀಘ್ರವಾಗಿ ಫಲ ದೊರೆಯುವ ವಿಶ್ವಾಸವಿದೆ ಎಂದು ತಿಳಿಸಿದರು.
ಈ ಸಂದರ್ಭ ಡಿಎಸ್ಎಸ್ ಮಹಿಳಾ ಸಮಿತಿ ಜಿಲ್ಲಾಧ್ಯಕ್ಷೆ ಸೌಮ್ಯ ನಾಗರಾಜು, ಜಿಲ್ಲಾ ಉಪಾಧ್ಯಕ್ಷ ಗಂಗಾಧರ,
ತಾಲೂಕು ಅಧ್ಯಕ್ಷೆ ಮಂಜುಳಾ ಕುಚೇಲ್ ಕುಮಾರ್, ಹಕ್ಕುಪತ್ರ ಹೋರಾಟ ಸಮಿತಿ ಸದಸ್ಯರಾದ
ಗುರು, ಮಂಜುಕುಟ್ಟಿ, ಮುತ್ತುರಾಜು, ದೀಪಿಕಾ, ರಶಿಕಲಾ, ಭವ್ಯ, ದೇವಿಕಾ, ಮುತ್ತುಲಕ್ಷ್ಮಿ, ನಾಗಮ್ಮ, ಪುನಿತ್ ರಾಜ್, ರೂಪಟ, ಅಯ್ಯಮ್ಮ, ಬಸವರಾಜು, ರಾಣಿ, ಮಹದೇವಮ್ಮ, ದಿಲ್ಶದ್ ಬೇಗಂ ಮತ್ತಿತರರು ಇದ್ದರು.
Back to top button
error: Content is protected !!