ಕುಶಾಲನಗರ, ಜ 27: ಕೊಡಗು ಅಭಿವೃದ್ಧಿ ಸಮಿತಿ ಎಲ್ಲೆಡೆ ಸ್ವಚ್ಚತೆ ಅಭಿಯಾನ ಕೈಗೊಂಡಿದ್ದು ನಾಮಫಲಕಗಳ ಅಳವಡಿಕೆ ಕಾರ್ಯಕ್ರಮ ನಡೆಸುತ್ತಿದೆ. ಈ ನಡುವೆ ಗಂಧದಕೋಟಿಯಿಂದ ಗೊಂದಿಬಸವನಹಳ್ಳಿಗೆ ತೆರಳುವ ಮಾರ್ಗದಲ್ಲಿ ಸ್ವಚ್ಚತೆ ಕಾಪಾಡುವಂತೆ ಕೋರಿ ಅಳವಡಿಸಿರುವ ಬ್ಯಾನರ್ ಬಳಿಯೇ ಸ್ಥಳೀಯರು ಕಸದ ರಾಶಿ ಹರಡಿರುವುದನ್ನು ಪತ್ತೆಹಚ್ಚಿದ ಕೊಡಗು ಅಭಿವೃದ್ಧಿ ಸಮಿತಿ ಸಲಹೆಗಾರರಾದ ಪಿ.ಕೆ.ಯಾದವರಾವ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತ್ಯಾಜ್ಯದಲ್ಲಿ ಫಾತಿಮಾ ಹೈಸ್ಕೂಲ್ ಗೆ ಶುಲ್ಕ ಪಾವತಿಸಿದ ರಶೀದಿ ದೊರೆತಿದ್ದು ಆ ಮೂಲಕ ತ್ಯಾಜ್ಯ ಹರಡಿದವರನ್ನು ಪತ್ತೆಹಚ್ಚಲಾಗುತ್ತದೆ ಎಂದು ಯಾದವರಾವ್ ತಿಳಿಸಿದ್ದಾರೆ.
Back to top button
error: Content is protected !!