ಪ್ರಕಟಣೆ

ನಿವೃತ್ತ ಮುಖ್ಯ ಶಿಕ್ಷಕ ಪಾರ್ಥಸಾರಥಿ ನಿಧನ

ಕುಶಾಲನಗರ, ಜು 17: ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರೌಢಶಾಲಾ ವಿಭಾಗದಲ್ಲಿ ಗಣಿತ ಶಿಕ್ಷಕರಾಗಿದ್ದು, ನಂತರ ಬಸವನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ಮೈಸೂರಿನಲ್ಲಿ ನೆಲೆಸಿದ್ದ ಕೆ.ಆರ್.ಪಾರ್ಥಸಾರಥಿ ( 72 ವರ್ಷ) ಅವರು ಸೋಮವಾರ ಮೈಸೂರಿನಲ್ಲಿ ನಿಧನ ಹೊಂದಿದರು.
ಮೃತರ ಅಂತ್ಯ ಸಂಸ್ಕಾರವು ಕೆ.ಆರ್.ನಗರದ ಕೆಸ್ತೂರಿನಲ್ಲಿ ಮಂಗಳವಾರ( ಜುಲೈ 18 ರಂದು ) ಬೆಳಿಗ್ಗೆ 10.00 ಗಂಟೆ ನಂತರ ನಡೆಯಲಿದೆ. .

ಮೃತರಿಗೆ ಕುಶಾಲನಗರ ಪಿಯೂ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲರು, ಶಿಕ್ಷಕ ವೃಂದ, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘ , ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಶಿಕ್ಷಕರು ಸಂತಾಪ ಸೂಚಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!