ಕುಶಾಲನಗರ, ಸೆ. 13: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಗ್ರಾಮದಲ್ಲಿರುವ ಹುದುಗೂರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 2024-25. ನೇ ಸಾಲಿನ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷರಾದ ಕಾಂಚನ ದೇವಾನಂದ್ ನವರ ಅಧ್ಯಕ್ಷತೆಯಲ್ಲಿ ಜರುಗಿತ್ತು.
ಮುಖ್ಯ ಅತಿಥಿಗಳಾಗಿ ಅಗಮಿಸಿದ್ದ ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ ಕೆ.ಕೆ.ಹೇಮಂತ್ ಕುಮಾರ್ ಮಾತಾನಾಡಿ ಹುದುಗೂರು ಹಾಲು ಉತ್ಪಾದಕರ ಸಂಘದ ಕಟ್ಟಡವು ಹಳೆದಾಗಿದ್ದು ನೂತನ ಕಟ್ಟಡದ ನಿರ್ಮಾಣಕ್ಕೆ ಒಕ್ಕೂಟದ ವತಿಯಿಂದ ಅನುದಾನವನ್ನು ನೀಡಲಾಗುವುದು, ಮೊದಲ ಜಾಗದ 9/11 ದಾಖಲೆ ಪತ್ರಗಳನ್ನು ಸರಿಪಡಿಸಿಕೊಂಡು ಆಡಳಿತ ಮಂಡಳಿಯ ತೀರ್ಮಾನದ ಮುಖೇನ ಪತ್ರವ್ಯವಹಾರ ಮಾಡಿದಲ್ಲಿ ನೂತನ ಕಟ್ಟಡದ ನಿರ್ಮಾಣಕ್ಕೆ ಸಹಾಯಧನವನ್ನು ನೀಡಲಾಗುವುದು, ಸದಸ್ಯರು ಗುಣಮಟ್ಟದ ಹಾಲನ್ನು ಸಂಘಕ್ಕೆ ಹಾಕುವ ಮೂಲಕ ಸಂಘದ ಅಭಿವೃದ್ಧಿಗೆ ಸಹಕಾರಿಗಳಾಗಬೇಕು ಎಂದು ತಿಳಿಸಿದರು.
ಒಕ್ಕೂಟದ ವಿಸ್ತಾರಣಾಧಿಕಾರಿ ಬಿ. ಬಿ. ವೀಣಾ ಪಶುಪಾಲನೆಯ ಬಗ್ಗೆ ಸವಿಸ್ತಾರವಾದ ಮಾಹಿತಿಯನ್ನು ನೀಡಿದರು.
ಸಂಘವು ಈ ಸಾಲಿನಲ್ಲಿ ಲಾಭಾಂಶ ಗಳಿಸಿದ ಸಮಗ್ರವಾದ ಮಾಹಿತಿಯನ್ನು ಅಧ್ಯಕ್ಷೆ ಕಾಂಚನ ದೇವಾನಂದ್ ಸಭೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಹೆಚ್.ಎಸ್. ರವಿ, ರತ್ನಮ್ಮ, ಉಪಾಧ್ಯಕ್ಷೆ ರಶ್ಮಿ, ನಿರ್ದೇಶಕರಾದ ಜಮುನಾ, ಪುಟ್ಟಮ್ಮ,ರತ್ನ, ಲತಾ,ಪದ್ಮ, ಸುಮಾ, ಪುಷ್ಪವತಿ, ಶೀಲಾವತಿ, ಕಾರ್ಯದರ್ಶಿ ಚಾನಕಿ,ಸೇರಿದಂತೆ ಹಾಲು ಉತ್ಪಾದಕ ಮಹಿಳಾ ಸದಸ್ಯರು ಹಾಜರಿದ್ದರು.
Back to top button
error: Content is protected !!