ಕುಶಾಲನಗರ, ಏ 08: ಇಂಡಿಯನ್ ಮೂವ್ಮೆಂಟ್ ಪಾರ್ಟಿಯಿಂದ ಮಡಿಕೇರಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅವಕಾಶ ದೊರೆತಿರುವುದಾಗಿ ಸಾಮಾಜಿಕ ಕಾರ್ಯಕರ್ತೆ ಕೆ.ಪಿ.ರಶೀದ ಬೇಗಂ ತಿಳಿಸಿದರು. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ 20 ವರ್ಷಗಳಿಂದ ತಾನು ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದನ್ನು ಗುರುತಿಸಿ ಐಎಂಪಿಯಿಂದ ವಿಶಲ್ ಚಿನ್ಹೆಯಡಿ ಸ್ಪರ್ಧಿಸಲು ಟಿಕೆಟ್ ದೊರೆತಿದೆ. ಮೂಲತಃ ಕೊಡಗಿನವಳಾದ ತಾನು ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗದ ಜಿಲ್ಲಾಧ್ಯಕ್ಷೆಯಾಗಿ ಹಲವು ರೀತಿಯ ಹೋರಾಟ ಕೈಗೊಂಡು ಬಡವರ, ಮಹಿಳೆಯರ ಧ್ವನಿಯಾಗಿದ್ದೇನೆ ಎಂದು ತಿಳಿಸಿದರು. ಪಾರ್ಟಿಯ ಪ್ರಮುಖರಾದ ಅಂಜು ಮಾತನಾಡಿದರು.
ಈ ಸಂದರ್ಭ ಪಾರ್ಟಿಯ ಪ್ರಮುಖರಾದ ರುಕ್ಸಾನ, ಪ್ರಭಾ, ಗಾಯತ್ರಿ, ಫರ್ಜಾನ, ರಿಹಾನ ಇದ್ದರು.
Back to top button
error: Content is protected !!