ಕುಶಾಲನಗರ, ಡಿ 22: ಬಿಲ್ಲವ ಸಮಾಜ ಬಾಂಧವರು ಒಗ್ಗೂಡಿ ಸಂಘಟಿತರಾಗುವ ಮೂಲಕ ಉತ್ತಮ ಸಮಾಜ ಕಟ್ಟಬೇಕು. ಆ ಸಮಾಜದ ಮೂಲಕ ಧರ್ಮಗುರುಗಳಾದ ನಾರಾಯಣ ಗುರುಗಳ ವಿಚಾರಧಾರೆಗಳನ್ನು ಜಮಸಾಮಾನ್ಯರಲ್ಲಿ ಮುಟ್ಟಿಸುವ ಮೂಲಕ ಆರೋಗ್ಯವಂತ ಹಾಗೂ ಸದೃಢ ಸಮಾಜ ಕಟ್ಟಲು ಮುಂದಾಗಬೇಕೆಂದು ಸೋಲೂರು ಮಠದ ಪೀಠಾಧ್ಯಕ್ಷರಾದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಕರೆಕೊಟ್ಟರು.
ಕುಶಾಲನಗರ ತಾಲ್ಲೂಕು ಕೋಟಿ ಚೆನ್ನಯ್ಯ ಬಿಲ್ಲವ ಸಮಾಜದ ವತಿಯಿಂದ ಪಟ್ಟಣದ ಎಪಿಸಿಎಂಎಸ್ ಸಭಾಂಗಣದಲ್ಲಿ ಹಮ್ಮಿ ಕೊಂಡಿದ್ದ ಸಮಾಜದ ವಾರ್ಷಿಕ ಮಹಾಸಭೆ ಹಾಗೂ ಗುರುನಮನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಈ ನಾಡು ಕಂಡ ಶ್ರೇಷ್ಟ ಸಾಧಕರಲ್ಲಿ ಒಬ್ಬರಾದ ಕೋಟಿ ಚೆನ್ನಯ್ಯ, ನಾರಾಯಣ ಗುರುಗಳಂತಹ ಮಹನೀಯರ ಆದರ್ಶಗಳು ಹಾಗೂ ಚಿಂತನೆಗಳನ್ನು ಸಮಾಜ ಅರಿಯಬೇಕು ಎಂದರು.
ರಾಜ್ಯ ಸರ್ಕಾರದ ನಾರಾಯಣ ಗುರು ನಿಗಮ ಮಂಡಳಿ ಅಧ್ಯಕ್ಷ ಮಂಜುನಾಥ ಪೂಜಾರಿ ಮುಖ್ಯ ಅತಿಥಿಯಾಗಿ ಮಾತನಾಡಿ, ಬಿಲ್ಲವರು ತಮ್ಮ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಬೇಕು. ಶಿಕ್ಷಣ ಹಾಗೂ ಜ್ಞಾನ ಬಹಳ ಮುಖ್ಯ. ಸಮಾಜ ಬಾಂಧವರು
ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಪಡೆದುಕೊಳ್ಳಬೇಕೆಂದು ಕರೆಕೊಟ್ಟರು.
ದಿಕ್ಸೂಚಿ ನುಡಿಗಳಾಡಿದ ನಾರಾಯಣ ಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಕೊಡಗಿನಲ್ಲಿ ಬಿಲ್ಲವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಸಂಘಟನೆಯನ್ನು ಬಲಪಡಿಸಲು ಅನುಕೂಲವಾಗುತ್ತಿದೆ.
ಸಮಾಜದ ಬಂಧುಗಳು ತಪ್ಪದೇ ಬಿಲ್ಲವ ಸಮಾಜದಲ್ಲಿ ಹೆಸರು ನೊಂದಾಯಿಸುವ ಮೂಲಕ ಸಮಾಜವನ್ನು ಇನ್ನಷ್ಟು ಬಲಗೊಳಿಸಲು ನೆರವಾಗಬೇಕು. ಹಾಗೆಯೇ ಸಮಾಜದ ಪದಾಧಿಕಾರಿಗಳು ಸಮುದಾಯದ ಮಂದಿಯ ಕಷ್ಟ ಕಾರ್ಪಣ್ಯಗಳಲ್ಲಿ ಕೈ ಜೋಡಿಸುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬ ಬೇಕು ಎಂದರು.
ಕೋಟಿ ಚೆನ್ನಯ್ಯ ಬಿಲ್ಲವ ಸಮಾಜದ ಅಧ್ಯಕ್ಷ ಸುಧೀರ್ ಪೂಜಾರಿ ಮಾತನಾಡಿ, ಕುಶಾಲನಗರದಲ್ಲಿ 300 ಕ್ಕೂ ಅಧಿಕ ಬಿಲ್ಲವ ಕುಟುಂಬಗಳಿದ್ದು ಅಲ್ಪ ಸಮಯದಲ್ಲಿ ರಚನೆಯಾದ ಬಿಲ್ಲವ ಸಮಾಜ ಬಹಳ ಸಮರ್ಥವಾಗಿ ಬೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ನಡೆವ ಚುನಾವಣೆಗಳಲ್ಲಿ ಬಿಲ್ಲವ ಸಮುದಾಯದ ಹೆಚ್ಚಿನ ಬಂಧುಗಳಿಗೆ ಟಿಕೆಟ್ ನೀಡುವ ಮೂಲಕ ಹೆಚ್ಚು ರಾಜಕೀಯ ಪ್ರಾತಿನಿಧ್ಯ ನೀಡಬೇಕೆಂದರು.
ಕಾರ್ಯಕ್ರಮದ ಆರಂಭಕ್ಕೂ ಮುನ್ನಾ
ಶ್ರೀ ಕೋಟಿ ಚೆನ್ನಯ್ಯ ಮತ್ತು ಶ್ರೀ ನಾರಾಯಣ ಗುರುಗಳ ಭಾವಚಿತ್ರಗಳಿಗೆ ಪುಷ್ಪನಮನ ಸಲ್ಲಿಸಲಾಯಿತು.
ಕೊಡಗು ಎಂಎಲ್ ಸಿ ಸುಜಾ ಕುಶಾಲಪ್ಪ ಹಾಗೂ
ಮಹಾಸಭೆ ಅಂಗವಾಗಿ ಬೈಚನಳ್ಳಿಯ ಶ್ರೀ ಮಾರಿಯಮ್ಮ ದೇವಸ್ಥಾನದಿಂದ ಗಣಪತಿ ದೇವಸ್ಥಾನದವರೆಗೂ ಮುಖ್ಯ ರಸ್ತೆಗಳಲ್ಲಿ ಸಮಾಜ ಬಾಂಧವರ ಒಗ್ಗಟ್ಟಿನ ಜಾಗೃತಿ ಯಾತ್ರೆ ನಡೆಯಿತು.
ಹಾಗೆಯೇ ಸಮಾಜ ಬಾಂಧವರಿಗೆ ಹಮ್ಮಿಕೊಂಡಿದ್ದ ಅಟೋಟ ಹಾಗೂ ಸಾಂಸ್ಕೃತಿಕಗಳ ವಿಜೇತರು ಮತ್ತು ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಜಿಲ್ಲಾ ಬಿಲ್ಲವ ಸಮಾಜದ ಅಧ್ಯಕ್ಷರಾದ ಲಿಂಗಪ್ಪ ಪೂಜಾರಿ, ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕರ್ಕೇರಾ, ಉದ್ಯಮಿ ಮಕ್ಕಂದೂರು ರಮೇಶ್, ಸಮಾಜದ ಗೌರವ ಅಧ್ಯಕ್ಷ ಬಿ.ಟಿ.ರಮೇಶ್,
ಕಾರ್ಯದರ್ಶಿ ದಿನೇಶ್,
ಉಪಾಧ್ಯಕ್ಷೆ ಕುಸುಮಾವತಿ,ಖಜಾಂಚಿ ಆಶಾ ಅಣ್ಣಪ್ಪ, ಸದಸ್ಯರಾದ ಅಶೋಕ್, ಉಮೇಶ್, ಸುನಿಲ್, ಶಶಿಕಲಾ, ಮನೋಜ್, ಸೌಮ್ಯ ಭರತ್, ಶೋಭಾ, ಭವಾನಿ, ಸುಶೀಲಾ, ಶರಣ್, ಅಣ್ಣು ಪೂಜಾರಿ, ಲೀಲಾ ಇದ್ದರು.
ಚೈತ್ರ ಶಾಲ್ಯಾನ್ ಸ್ವಾಗತಿಸಿದರು. ಸತೀಶ್ ಕುಂದರ್ ನಿರೂಪಿಸಿದರು. ರೇಶ್ಮಾ ಮೋನಪ್ಪ ವಂದಿಸಿದರು.
Back to top button
error: Content is protected !!