ಸಾಂಸ್ಕೃತಿಕ

ಎಂಜಿಎಂ ಪದವಿ ಕಾಲೇಜಿನಲ್ಲಿ ಕಲಾರಂಭ-2025 ಉದ್ಘಾಟನಾ ಸಮಾರಂಭ

ಕುಶಾಲನಗರ, ಅ 29: ಕುಶಾಲನಗರದ ಎಂಜಿಎಂ ಪದವಿ ಕಾಲೇಜಿನಲ್ಲಿ ಕಲಾರಂಭ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಕಾರ್ಯಕ್ರಮ ಜರುಗಿತು . ಈ ಕಾರ್ಯಕ್ರಮದ ಅಧ್ಯಕ್ಷಸ್ಥಾನ ವಹಿಸಿಕೊಂಡಿದ್ದವರು ಮಹೇಶ್ ಅಮೀನ್ ರವರು ಕಛೇರಿ ಅದೀಕ್ಷಕರು ,‌ವಿವೇಕಾನಂದ ವಿದ್ಯಾ ಸಂಸ್ಥೆ , ಕುಶಾಲನಗರ .ಕಾರ್ಯಕ್ರಮದ ಉದ್ಘಾಟನೆ ಮತ್ತು ಮುಖ್ಯ ಅತಿಥಿಗಳಾಗಿ  ಶೋಭಭಟ್ ,ಶಿಕ್ಷಕರು, ಜ್ಞಾನ ಭಾರತಿ ಶಾಲೆ, ಆಕಾಶವಾಣಿ ಕಲಾವಿದರು.ಇವರು ವಿದ್ಯಾರ್ಥಿಗಳಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸ್ವ ಇಚ್ಛೆಯಿಂದ ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ಹೊರಹಾಕಬೇಕು ಹಾಗು ಜಗತ್ತಿನಾದ್ಯಂತ ತಮ್ಮ ಪ್ರತಿಭೆ ಗುರುತಿಸಿಕೊಳ್ಳುವಂತೆ ಆಗಲಿ ಎಂದು ಆಶಿಸಿದರು. ಇನ್ನೊಬ್ಬರು ಅತಿಥಿಯಾದ  ಕ್ಲಾರರೇಷ್ಮಾರವರು ಶುಭಕೋರಿದರು. ಲಿಖಿತಾ ಟಿ.ಎ ರವರು ಪ್ರಾಂಶುಪಾಲರು ಎಂಜಿಎಂ‌ ಪದವಿ ಕಾಲೇಜು ಕುಶಾಲನಗರ. ಇವರು ಪ್ರಾಸ್ತಾವಿಕ ನುಡಿ ಆಡಿದರು ಮತ್ತು ಎಲ್ಲರನ್ನೂ ಸ್ವಾಗತಿಸಿದರು.ಇಂದಿನಿಂದ ಮೂರು ದಿನಗಳ ಕಾಲ ಪದವಿ ವಿದ್ಯಾರ್ಥಿಗಳಿಗೆ ನೃತ್ಯ , ಹಾಡು,ಬೆಂಕಿ ಸಹಿತ ಅಡುಗೆ ,ಮೆಹಂದಿ,ಕಸದಿಂದ ರಸ,ಪ್ರಬಂಧ ಸ್ಪರ್ಧೆ ಹೀಗೆ ಅನೇಕ ಕಾರ್ಯಕ್ರಮ ಗಳು ಜರುಗುತ್ತವೆ.ಈ ಕಾರ್ಯಕ್ರಮ ದ ನಿರೂಪಣೆ ವಾಣಿಜ್ಯ ವಿಭಾಗದ ಉಪನ್ಯಾಸಕರಾದ ದೇವೇಂದ್ರರವರು ನಡೆಸಿಕೊಟ್ಟರು ,ವಂದನಾರ್ಪಣೆ ಕನ್ನಡ ಉಪನ್ಯಾಸಕರಾದ ಮಂಜೇಶ್ ರವರು ಹಾಗೂ ಎಂಜಿಎಂ ಕಾಲೇಜು ಮತ್ತು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಬೋಧಕ ಮತ್ತು ಬೋಧಕೇತರ ವರ್ಗ , ಪದವಿ ವಿದ್ಯಾರ್ಥಿಗಳು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!