ಕುಶಾಲನಗರ, ಮಾ 17: ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ, ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬ್ಯಾನರ್ ಹಿಡಿದು, ಸಿಲಿಂಡರ್ ಚಿತ್ರ ಹಿಡಿದು ಕಾಂಗ್ರೆಸ್ ಕಚೇರಿಯಿಂದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಕಾಂಗ್ರೆಸ್ ಕಚೇರಿಯಿಂದ ಐಬಿ ವೃತ್ತದ ಮೂಲಕ ಬಿಎಂ ರಸ್ತೆಯಲ್ಲಿ ಸಾಗಿದ ಪ್ರತಿಭಟನಾಕಾರರು ಕಾರ್ಯಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರ್ಕಾರದ ಹಾಗೂ ಪ್ರಧಾನಿ ಮೋದಿ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಲ್ ನಲ್ಲಿ ಸೌದೆ ಯಿಂದ ಟೀ ಮಾಡುವ ಮಾಡುವ ಮೂಲಕ ಅಣಕು ಪ್ರದರ್ಶನ ನೀಡಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ವಿ.ಪಿ.ಶಶಿಧರ್ ಮಾತನಾಡಿ, ಅಮೇರಿಕಗೆ ತಲೆಬಾಗುವ ಮೂಲಕ
ಪ್ರಧಾನಿ ಮೋದಿ ವಿಶ್ವಮಟ್ಟದಲ್ಲಿ ಭಾರತದ ಮಾನ ಹರಾಜು ಹಾಕುತ್ತಿದೆ.
ಯುದ್ದದಿಂದ ತೈಲ ಬೆಲೆಏರಿಕೆ, ಅಡುಗೆ ಅನಿಲ ಕೊರತೆ ಎದುರಾಗಿದ್ದು ಸೌದೆಯಲ್ಲಿ ಅಡುಗೆ ಮಾಡುವ ಪರಿಸ್ಥಿತಿ ಉಂಟುಮಾಡಿ ಶಿಲಾಯುಗಕ್ಕೆ ಕೊಂಡೊಯ್ದಿದ್ದಾರೆ. ಅನಿಲ ಕೊರತೆಯಿಂದ ರಾಜ್ಯದಲ್ಲಿ ಪ್ರತಿನಿತ್ಯ ಹೋಟೆಲ್ ಉದ್ಯಮ 100 ಕೋಟಿ ನಷ್ಟ ಅನುಭವಿಸುತ್ತಿದೆ. ಶಾಮಿಯಾನ ಅಳವಡಿಸಿ ಸೌದೆ ಒಲೆಯಲ್ಲಿ ಅಡುಗೆ ಮಾಡುವ ಪರಿಸ್ಥಿತಿ ಎದುರಾಗಿದೆ.
ಯುದ್ಧ ನಡೆಯುವ ಬಗ್ಗೆ ಕೇಂದ್ರ ಸರ್ಕಾರಕ್ಕೆ ಗೊತ್ತಿದ್ದರೂ ಯಾವುದೇ ಪೂರ್ವ ತಯಾರಿ ಮಾಡಿಕೊಳ್ಳದೆ ಇಂದು ವೈಫಲ್ಯ ಎದುರಿಸುತ್ತಿದ್ದಾರೆ.
ದೇಶದ ಸಮಸ್ಯೆಗಳ ಬಗ್ಗೆ ಗಮನಹರಿಸದೆ ಕೇವಲ ಚುನಾವಣೆ ವಿಚಾರದಲ್ಲಿ ಮಗ್ನರಾಗಿದ್ದಾರೆ ಎಂದು ಅಪಹಾಸ್ಯ ಮಾಡಿದರು.
ಈ ಸಂದರ್ಭ ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಗೋವಿಂದಪ್ಪ, ಮುಖಂಡರಾದ ಕೃಷ್ಣೇಗೌಡ, ರಮೇಶ್,ವಿ.ಎಸ್.ಆನಂದ್ ಕುಮಾರ್, ಅಬ್ದುಲ್ ರಜಾಕ್, ಟಿ.ಕೆ.ಪಾಂಡುರಂಗ, ಧರಣೇಂದ್ರಕುಮಾರ್, ಎಸ್.ಎಸ್.ಶ್ರೀನಿವಾಸ್, ರಫೀಕ್, ಅಜೀಜ್, ಟಿ.ಬಿ.ಜಗದೀಶ್, ಮುಸ್ತಾಫ ಮಲ್ಲಿಕಾರ್ಜುನ, ಶಶಿಭೀಮಯ್ಯ, ದಾಮೋದರ್, ಟಿ.ಬಿ
ಜಗದೀಶ್, ನಂಜುಂಡಸ್ವಾಮಿ,ಸುನಿತಾ, ರುಬೀನಾ, ಪದ್ಮ, ಸರೋಜ,ಜಯಲಕ್ಷ್ಮಮ್ಮ, ವಿ.ಜೆ
ನವೀನ್, ರಂಜನ್, ಆದಂ ಎಸ್ ಮತ್ತಿತರರು ಪಾಲ್ಗೊಂಡಿದ್ದರು.
Back to top button
error: Content is protected !!