ಕಾರ್ಯಕ್ರಮ

ಕುಶಾಲನಗರ ಪುನಿತ್ ರಾಜ್ ಕುಮಾರ್ ಅಭಿಮಾನಿ ಬಳಗದಿಂದ ಪುನಿತ್ ಹುಟ್ಟುಹಬ್ಬ ಆಚರಣೆ

ಕುಶಾಲನಗರ, ಮಾ 17: ಕುಶಾಲನಗರದ ಮಾರುಕಟ್ಟೆ ರಸ್ತೆ ಡಾ. ಪವರ್ ಸ್ಟಾರ್ ಪುನಿತ್ ರಾಜ್ ಕುಮಾರ್ ಅಭಿಮಾನಿ ಬಳಗದಿಂದ ಪುನಿತ್ ಹುಟ್ಟುಹಬ್ಬ ಆಚರಣೆ ಸಾರಿಗೆ ಬಸ್ ನಿಲ್ದಾಣ ಆವರಣದಲ್ಲಿ ನಡೆಯಿತು.

ಬೃಹತ್
ಕೇಕ್ ಕತ್ತರಿಸಿ ನೆರೆದಿದ್ದವರಿಗೆ ಹಂಚುವ ಮೂಲಕ ಪುನಿತ್ ಹುಟ್ಟುಹಬ್ಬವನ್ನು ಸ್ಮರಿಸಲಾಯಿತು.

ಅತಿಥಿಗಳಾಗಿ ಪಾಲ್ಗೊಂಡಿದ್ದ ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಪುನಿತ್ ರಾಜ್ ಕುಮಾರ್ ಸೇವೆಯನ್ನು ಕೊಂಡಾಡಿದರು. ಸರಳತೆಯ ಸಂಕೇತವಾಗಿದ್ದ ಪುನಿತ್ ಹುಟ್ಟು ಹಬ್ಬವನ್ನು ರಾಜ್ಯಾದ್ಯಂತ ಸಂಭ್ರಮದಿಂದ ಆಚರಿಸಲು ಪ್ರಬಲ ಕಾರಣವಿದೆ. ಮನೆ ಸದಸ್ಯನ ರೀತಿ ಆಚರಣೆ ನಡೆಯುತ್ತಿದೆ. ಪುನಿತ್ ಅವರಂತೆ ಬದುಕಿನಲ್ಲಿ ಸಾರ್ಥಕತೆ ಕಂಡುಕೊಳ್ಳಬೇಕಿದೆ ಎಂದರು.

ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ
ಮೈಸಿ ಕತ್ತಣ್ಣಿರ ಮಾತನಾಡಿದರು. ಪುನಿತ್ ಅವರ ಸೇವೆ ಪರಿಗಣಿಸಿ ಅವರ ಪುತಃಳಿ‌ ನಿರ್ಮಾಣ ಕಾರ್ಯ ಆಗಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇದೇ ಸಂದರ್ಭ ನೆರೆದಿದ್ದ ಸಾರ್ವಜನಿಕರಿಗೆ ಅಭಿಮಾನಿ ಬಳಗದಿಂದ ಅನ್ನಸಂತರ್ಪಣೆ ಕಾರ್ಯ ನಡೆಯಿತು.

ಈ ಸಂದರ್ಭ ಅಭಿಮಾನಿ ಬಳಗದ ಅಧ್ಯಕ್ಷ
ಗಿರೀಶ್ ಕಲಾವಿದ, ಎಎಸ್ಐ ನಂದ, ಕಂದನ್ ಟ್ರಾನ್ಸ್ ಪೋರ್ಟ್ ಮಾಲೀಕ ಮಹೇಶ್, ಉದ್ಯಮಿ ಪುಷ್ಪ, ಕಾಂಗ್ರೆಸ್ ಕಾರ್ಮಿಕ ಘಟಕದ ಕಾರ್ಯದರ್ಶಿ ನಾಗರಾಜ್, ಅಭಿಮಾನಿ ಬಳಗದ ಕಾರ್ಯದರ್ಶಿ ಗಣೇಶ್ ಗಿರಿಪ್ರಸಾದ್, ಆಟೋ ಚಾಲಕರು ಮಾಲೀಕರ ಸಂಘದ ಗೌರವಾಧ್ಯಕ್ಷ ಕೃಷ್ಣ ದರ್ಶನ್, ಟಿ.ಎ.ನಾರಾಯಣ ಗೌಡರ ಕರವೇ ಕ್ಷೇತ್ರ ಅಧ್ಯಕ್ಷ ಆನಂದ್ ಕನ್ನಡಿಗ, ಪ್ರಧಾನ ಕಾರ್ಯದರ್ಶಿ ಮುರಳಿ, ಸಂಘಟನಾ ಕಾರ್ಯದರ್ಶಿ ಜೈಸ್ವಾಮಿ, ನಗರಾಧ್ಯಕ್ಷ ಡಿ.ಆರ್.ಯೋಗೇಶ್, ಉಪಾಧ್ಯಕ್ಷ ಡಿ.ಎನ್.ರವಿ, ತಾಲೂಕು ಪ್ರಧಾನ ಕಾರ್ಯದರ್ಶಿ ಕುಮಾರ್ ಆರ್. ದೇವಾಂಗ, ಆಟೋ ಚಾಲಕರು ಮಾಲೀಕರ ಸಂಘದ
ಮಾಜಿ ಖಜಾಂಚಿ ಡಿ.ಎಸ್.ರಮೇಶ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!