ಕುಶಾಲನಗರ, ಆ 05; ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ತನಿಖೆಗೆ ಸರ್ಕಾರ ಎಸ್ಐಟಿ ರಚನೆ ಮಾಡಿರುವ ಕ್ರಮವನ್ನು ನಾವು ಸ್ವಾಗತಿಸುತ್ತೇವೆ. ಆದರೆ ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಹಾಗೂ ಅವಹೇಳನ ಮಾಡುವ ಮೂಲಕ ಕೋಟ್ಯಾಂತರ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುತ್ತಿರುವ ಕ್ರಮವನ್ನು ಖಂಡಿಸುತ್ತೇವೆ ಎಂದು ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎ.ಟಿ.ರಂಗಸ್ವಾಮಿ ಹೇಳಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಧರ್ಮಸ್ಥಳ ಪ್ರಕರಣಕ್ಕೆ ಸರ್ಕಾರ ಎಸ್ಐಟಿ ರಚನೆ ಮಾಡಿರುವುದು ಒಳ್ಳೆಯ ಸಂಗತಿ. ಈ ತಂಡ ಪೂರ್ಣ ತನಿಖೆ ಮಾಡಲಿ. ಹೆಗಡೆ ಅವರು ನಿರ್ದೂಷಿಯಾಗಿ ಬರುತ್ತಾರೆ ಎಂಬ ಭಾವನೆ ನಮಗಿದೆ ಎಂದರು.
ಧರ್ಮಸ್ಥಳ ಹಾಗೂ ಹೆಗಡೆ ಅವರ ವಿರುದ್ಧ ಕಾಣದ ಕೈಗಳು ಕೆಲಸ ಮಾಡುತ್ತಿವೆ. ಎಷ್ಟೋ ವರ್ಷಗಳ ಹಿಂದೆ ಹೂತ್ತಿರುವ ಶವಗಳನ್ನು ತೆಗೆಯುವ ಮೂಲಕ ಅರ್ಥವಾಗದ ರೀತಿಯಲ್ಲಿ ತನಿಖಾ ಕಾರ್ಯ ನಡೆಯುತ್ತಿದೆ. ಇದಕ್ಕೆ ನಾವು ವಿರೋಧ ಮಾಡುತ್ತೇವೆ ಎಂದರು. ಇದುವರೆಗೂ ಯಾವುದೇ
ಸರ್ಕಾರ ಮಾಡದ ಕೆಲಸವನ್ನು ಹೆಗಡೆ ಮಾಡುತ್ತಾ ಬಂದಿದ್ದಾರೆ.
ಶಾಲೆಗಳ, ದೇವಾಲಯಗಳ, ಕೆರೆಗಳ ಅಭಿವೃದ್ಧಿಗೆ ಒತ್ತು ನೀಡುತ್ತಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಮೂಲಕ ಕೋಟ್ಯಾಂತರ ಮಹಿಳೆಯರಿಗೆ ಸಾಲಸೌಲಭ್ಯ ನೀಡಿ ಸ್ವಾವಲಂಬಿ ಬದುಕಿಗೆ ಕಾರಣರಾಗಿದ್ದಾರೆ. ಇಂತಹ ಮಹಾನ್ ಧರ್ಮದರ್ಶಿ ಹೆಗಡೆ ಅವರ ಬಗ್ಗೆ ಕೆಲವು ಪೇಮೆಂಟ್ ಗಿರಾಕಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಹೆಗ್ಡೆ ಅವರ ಅಧಿಕಾರ ಮೊಟಕುಗಳಿಸಿ ಅವರು ಅಧಿಕಾರ ನಡೆಸಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ದೂರಿದರು.
ಎಸ್ಐಟಿ,ಸರ್ಕಾರದ ಬಗ್ಗೆ ಗೌರವವಿದೆ. ತನಿಖೆಯ ಹೆಸರಿನಲ್ಲಿ
ಹೆಗಡೆ ಅವರಿಗೆ ಯಾವುದೇ ತೊಂದರೆಆಗಬಾರದು. ಅವರೊಂದಿಗೆ ನಾವು ಕೈಜೋಡಿಸಲು ಸಿದ್ಧರಾಗಿದ್ದೇವೆ ಎಂದರು.
ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಪುಂಡರೀಕಾಕ್ಷ ಮಾತನಾಡಿ, ಧರ್ಮಸ್ಥಳ ಹಾಗೂ ಹೆಗಡೆ ಅವರ ಬಗ್ಗೆ ಅನ್ಯಧರ್ಮಿಯ ಕೆಲವು ಪುಂಡರು ಅವಹೇಳನಕಾರಿ ಹೇಳಿಕೆ ನೀಡುತ್ತಿರುವುದನ್ನು ಖಂಡಿಸುತ್ತೇವೆ. ನೂರು ವರ್ಷ ಆಲೋಚನೆ ಇಟ್ಟುಕೊಂಡು ಹೆಗಡೆ ಅವರು ಗ್ರಾಮಾಭಿವೃದ್ಧಿ ಯೋಜನೆಗಳ ಮೂಲಕ ಬಡ ಹೆಣ್ಣುಮಕ್ಕಳ ಏಳಿಗೆಗೆ ಶ್ರಮಿಸುತ್ತಿದ್ದಾರೆ. ಶಿಕ್ಷಣದ ಜೊತೆಗೆ
1954 ಮಧ್ಯವರ್ಜನ ಶಿಬಿರಗಳನ್ನು ನಡೆಸುವ ಮೂಲಕ ಒಂದೂವರೆ ಲಕ್ಷ ಮಂದಿಯನ್ನು ಪಾನಮುಕ್ತಗೊಳಿಸಿ ಅನೇಕ ಕುಟುಂಬಗಳಿಗೆ ದಾರಿದೀಪವಾಗಿದ್ದಾರೆ ಎಂದರು. ಧರ್ಮಸ್ಥಳ ಪ್ರಕರಣ ಬೇಗ ಬೆಳಕಿಗೆ ಬರಲಿ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಹೆಣ್ಣು ಮಕ್ಕಳಿಗೆ ಅನ್ಯಾಯ ಆಗುವುದನ್ನು ಖಂಡಿಸುತ್ತೇವೆ ಎಂದರು.
ಕೊಡಗು ಜಿಲ್ಲಾ ಜನಜಾಗೃತಿ ವೇದಿಕೆ ನಿರ್ದೇಶಕ ಷಣ್ಮುಖ ರಾವ್ ಮಾತನಾಡಿ, ಹಿಂದೂಗಳು ಒಗ್ಗಟ್ಟು ಆಗಬೇಕು. ಧರ್ಮಸ್ಥಳದ ಬಗ್ಗೆ ಕುತಂತ್ರ ಮಾಡಲಾಗುತ್ತಿದೆ.
ಲಕ್ಷಾಂತರ ಜನರಿಗೆ ಅನ್ನ,ಶಿಕ್ಷಣ ನೀಡುತ್ತಿರುವ ಪೂಜ್ಯರ ವಿರುದ್ಧ ಷಡ್ಯಂತ್ರ ನಡೆಸಲಾಗುತ್ತಿದೆ.
ಹೂತುಹಾಕಿರುವ ಹೆಣಗಳ ಬಗ್ಗೆ ಮಾಹಿತಿ ನೀಡುತ್ತಿರುವ ವ್ಯಕ್ತಿ ಈ ಹಿಂದೆ ಸತ್ತ ಹೆಣದಿಂದ ಚಿನ್ನಾಭರಣ ಕಳವು ಮಾಡುತ್ತಿದ್ದ ಎಂದು ಅಲ್ಲಿನ ಪಂಚಾಯತಿ ಅಧ್ಯಕ್ಷರು ಹೇಳಿದ್ದಾರೆ ಎಂದರು. ಧರ್ಮಸ್ಥಳದ ಎಲ್ಲಾ ಪ್ರಕರಣಗಳ ಬಗ್ಗೆ ತನಿಖೆ ನಡೆಯಲಿ ಇದರಿಂದ ಹೆಗಡೆ ನಿರ್ದೂಷಿಯಾಗಿ ಬರುತ್ತಾರೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಜನಜಾಗೃತಿ ವೇದಿಕೆ ಸದಸ್ಯರಾದ ಎ.ಎಸ್.ಚಂದ್ರಶೇಖರ್ ಆವರ್ತಿ,ನಿಸರ್ಗ ಸ್ವಾಮಿ,
ಚಂದ್ರು, ಹಾಜರಿದ್ದರು.
Back to top button
error: Content is protected !!