ಕುಶಾಲನಗರ, ಜ 20:
ಕೂಡುಮಂಗಳೂರು ಜೆಡಿಎಸ್ ಕಾರ್ಯಕರ್ತರ ಸಭೆ ಖಾಸಗಿ ಸಭಾಂಗಣದಲ್ಲಿ
ಹಾಸನ ಹಾಲು ಒಕ್ಕೂಟದ ನಿರ್ದೇಶಕ ಕೆ.ಕೆ.ಹೇಮಂತ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಸುಮಾರು 80ಕ್ಕೂ ಹೆಚ್ಚು ಜೆಡಿಎಸ್ ನ ಹಳೆಯ
ಕಾರ್ಯಕರ್ತರು ಪಾಲ್ಗೊಂಡಿದ್ದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಹಾಸನ ಹಾಲು ಒಕ್ಕೂಟದ ನಿರ್ದೇಶಕ ಕೆ.ಕೆ. ಹೇಮಂತ್ ಕುಮಾರ್, ಸುಮಾರು 35 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ನಮ್ಮ ಜೆಡಿಎಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಬೇಕು ಎಂದರು. ನಮ್ಮ ಪಕ್ಷದ ಪ್ರಮುಖ ಮುಖಂಡರು ಸಂಘಟನ ಚತುರರು ಆದ ಸಂಭಾವ್ಯ ಅಭ್ಯರ್ಥಿ ನಾಪಂಡ ಮುತ್ತಪ್ಪ ಅವರನ್ನು ಕ್ಷೇತ್ರದಲ್ಲಿ ಗೆಲ್ಲಿಸುವ ನಿಟ್ಟಿನಲ್ಲಿ ನಾವೆಲ್ಲರೂ ಒಂದಾಗಿ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ಪಕ್ಷದಲ್ಲಿ ಯಾವುದೇ ರೀತಿಯ ಭಿನ್ನಾಭಿಪ್ರಾಯಗಳು ಇದ್ದರೂ ಅವೆಲ್ಲವನ್ನು ಮರೆತು ಪಕ್ಷದ ಏಳಿಗೆಗೆ ಹಾಗೂ ಪಕ್ಷದ ಅಧಿಕಾರಕ್ಕಾಗಿ ದುಡಿಯೋಣ ಎಂದರು.
ನಂತರ ಮಾತನಾಡಿದ ಅಭ್ಯರ್ಥಿ ನಾಪಂಡ ಮುತ್ತಪ್ಪ, ನಾನು ಈ ಕ್ಷೇತ್ರದಲ್ಲಿ ಸುಮಾರು 15 ವರ್ಷಗಳಿಂದ ಸಂಘಟನೆ ಮಾಡಿಕೊಂಡು ಬಂದಿದ್ದು ನನ್ನ ಬೆಂಬಲಿಗರು ಹಾಗೂ ನನ್ನ ಆತ್ಮೀಯರು ನನ್ನ ಜೊತೆಯಲ್ಲಿ ಇದ್ದಾರೆ. ಕುಮಾರಸ್ವಾಮಿ ಯವರ ಪಂಚರತ್ನ ಯೋಜನೆ ಈಗಾಗಲೇ ರಾಜ್ಯಾದ್ಯಂತ ಯಶಸ್ವಿಯಾಗಿ ಸಾಗುತ್ತಿದ್ದು ಮುಂದಿನ ಚುನಾವಣೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.
ಕಾರ್ಯಕ್ರಮದಲ್ಲಿ ಹಲವಾರು ಮುಖಂಡರು ತಮ್ಮ ಅನಿಸಿಕೆ, ಅಭಿಪ್ರಾಯ ತಿಳಿಸಿದರು.
ಸಭೆಯಲ್ಲಿ ಪಕ್ಷದ ಮುಖಂಡರಾದ ರಾಮಚಂದ್ರು, ಶೇಖರ್, ಅಜ್ಜಳ್ಳಿ ರವಿ, ಕೃಷ್ಣೆಗೌಡ್ರು, ಭೀಮಣ್ಣ, ಕೃಷ್ಣ, ಜಯಣ್ಣ, ಸರ್ಕಲ್ ಮಂಜು ಮತ್ತಿತರರು ಇದ್ದರು.
Back to top button
error: Content is protected !!