ಕುಶಾಲನಗರ, ಜ 03: ಕೂಡುಮಂಗಳೂರು ಗ್ರಾಪಂ ವ್ಯಾಪ್ತಿಯ ಕೂಡ್ಲೂರು ಕೈಗಾರಿಕಾ ಬಡಾವಣೆ ಒತ್ತಿನಲ್ಲಿ ಅರಣ್ಯ ಇಲಾಖೆಗೆ ಸೇರಿದ ಜಾಗದಿಂದ ಮಣ್ಣು ಅಗೆದು ಸಾಗಾಟ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಫಿ ಉದ್ಯಮಿಯೊಬ್ಬರ ಮೇಲೆ ಪ್ರಕರಣ ದಾಖಲಾಗಿದೆ.
ಕಾಫಿ ವರ್ಕ್ಸ್ ಒತ್ತಿನಲ್ಲಿರುವ ಅರಣ್ಯ ಇಲಾಖೆ ಸೇರಿದ ಜಾಗದಿಂದ ಜೆಸಿಬಿ ಬಳಸಿ ಮಣ್ಣು ತೆಗೆದು ಸಾಗಿಸಲಾಗುತ್ತಿತ್ತು. ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ವಲಯ ಅರಣ್ಯಾಧಿಕಾರಿ ಶಿವರಾಂ ಮತ್ತು ತಂಡ ಮಣ್ಣು ಸಾಗಾಟಕ್ಕೆ ತಡೆಯೊಡ್ಡಿ ಕಾಫಿ ವರ್ಕ್ಸ್ ಮಾಲೀಕ ಪ್ರಭಾಕರ ಎಂಬವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
Back to top button
error: Content is protected !!