ಕುಶಾಲನಗರ, ಜ 03:
ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆಹೊಸೂರು ಗ್ರಾಮ ಸೇರಿದಂತೆ ಉಪ ಗ್ರಾಮಗಳ ರೈತರು ತಮ್ಮ ಸ್ವಾಧೀನದಲ್ಲಿರುವ ಸರಕಾರಿ ಜಮೀನಿನ ಹಕ್ಕು ಪತ್ರವನ್ನು ಪಡೆಯಲು ಈಗಾಗಲೇ ನಮೂನೆ 57 ರ ಅರ್ಜಿಗಳನ್ನು ಕಂದಾಯ ಇಲಾಖೆಗೆ ಸಲ್ಲಿಸಿದ್ದಾರೆ.
ಅರ್ಜಿ ಅನ್ವಯ ಕಂದಾಯ ಇಲಾಖೆಯ ಅಧಿಕಾರಿಗಳ ತಂಡ ಆಯಾ ಅರ್ಜಿದಾರ ರೈತರ ಜಮೀನಿಗೆ ತೆರಳಿ ಜಮೀನಿನ ಸಮೀಕ್ಷೆ ಸೇರಿದಂತೆ ದಾಖಲೆಗಳ ಪರಿಶೀಲನೆ, ಸರ್ವೆ ಕಾರ್ಯಕ್ಕೆ ಸಂಬಂಧಿಸಿದಂತೆ ಕಾರ್ಯಗಳನ್ನು ಕೈಗೊಳ್ಳುವ ವಿಚಾರಗಳ ಬಗ್ಗೆ ರೈತರಿಗೆ ಮಾಹಿತಿ ನೀಡುವ ಕಾರ್ಯದಲ್ಲಿ ತೊಡಗಿದ್ದಾರೆ.
ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಉಪ ತಹಸೀಲ್ದಾರ್ ಮಧುಸೂದನ್, ಕಂದಾಯ ನಿರೀಕ್ಷಕ ಸಂತೋಷ, ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ್, ಸಹಾಯಕ ಲೋಕೇಶ್ ಸೇರಿದಂತೆ ರೈತರು ಹಾಜರಿದ್ದರು.
Back to top button
error: Content is protected !!