ಕಾರ್ಯಕ್ರಮ

65ನೇ ಹುಟ್ಟುಹಬ್ಬ ಸಿಎಂ ಆಗಿ ಆಚರಿಸಿ: ಕುಶಾಲನಗರದಲ್ಲಿ ಎಚ್.ಡಿ.ಕೆ.ಬರ್ತ್ ಡೆ

ಕುಶಾಲನಗರ, ಡಿ‌ 16: ಕುಶಾಲನಗರ ತಾಲೂಕು ಜೆಡಿಎಸ್ ವತಿಯಿಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ 64ನೇ ಹುಟ್ಟುಹಬ್ಬವನ್ನು ಆಚರಿಸಲಾಯಿತು.

ಕುಶಾಲನಗರದ ಪ್ರವಾಸಿ‌ ಮಂದಿರದಲ್ಲಿ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿದರು. 2023 ಕ್ಕೆ ಕುಮಾರಸ್ವಾಮಿ ಅವರು ತಮ್ಮ 65ನೇ ವರ್ಷದ ಹುಟ್ಟುಹಬ್ಬವನ್ನು ಮುಖ್ಯಮಂತ್ರಿಯಾಗಿ ಆಚರಿಸುವಂತಾಗಲಿ ಎಂದು ಪ್ರಾರ್ಥಿಸಿ ಶುಭಕೋರಿದರು.

ಈ ಸಂದರ್ಭ ಮಾತನಾಡಿದ ಜೆಡಿಎಸ್ ಮುಖಂಡ ನಾಪಂ‌ಡ‌ ಮುತ್ತಪ್ಪ ರಾಜ್ಯ ಕಂಡ ಅತ್ಯುತ್ತಮ ಮುಖ್ಯಮಂತ್ರಿಗಳಲ್ಲಿ ಕುಮಾರಸ್ವಾಮಿ‌ ಕೂಡ ಒಬ್ಬರು. ಇಂದು ಅವರ 64ನೇ ಹುಟ್ಟುಹಬ್ಬವನ್ನು ರಾಜ್ಯಾದ್ಯಂತ ಆಚರಣೆ ಮಾಡಲಾಗುತ್ತಿದೆ. ಮುಂಬರುವ ಚುನಾವಣೆಯಲ್ಲಿ ಅವರು ಮತ್ತೊಮ್ಮೆ ರಾಜ್ಯದ ಚುಕ್ಕಾಣಿ ಹಿಡಿಯಲಿ ಎಂದು ಹಾರೈಸಿದರು.

ಜಿಲ್ಲಾ ಯುವ ಜೆಡಿಎಸ್ ಅಧ್ಯಕ್ಷ ಸಿ.ಎಲ್.ವಿಶ್ವ ಮಾತನಾಡಿ, ರಾಜ್ಯದ ಮಣ್ಣಿನ‌ ಮಗ ಕುಮಾರಣ್ಣ ಅವರಿಗೆ ದೇವರು, ಉತ್ತಮ ಆಯಸ್ಸು, ಆರೋಗ್ಯದ ಜೊತೆಗೆ ಮತ್ತೊಮ್ಮೆ ರಾಜ್ಯದ ಜನಸೇವೆ ಮಾಡುವ ಅಧಿಕಾರ ಕರುಣಿಸಲಿ ಎಂದರು.

ಕುಶಾಲನಗರ ತಾಲೂಕು ಅಧ್ಯಕ್ಷ ಪಿ.ಡಿ.ರವಿಕುಮಾರ್ ಮಾತನಾಡಿ, ಎಚ್.ಡಿ.ಕುಮಾರಸ್ವಾಮಿ ಅವರು‌ ಮತ್ತೊಮ್ಮೆ ರಾಜ್ಯದ ಸಿಎಂ ಆಗಲು ರಾಜ್ಯದ ಜನತೆ ಆಶಿಸಿ ಆಶೀರ್ವದಿಸಲಿ ಎಂದರು.
ಈ ಸಂದರ್ಭ ಜಿಲ್ಲಾ ಘಟಕದ ಉಪಾಧ್ಯಕ್ಷ ಎಚ್.ಡಿ.ಚಂದ್ರು, ಹಿಂದುಳಿದ ವರ್ಗಗಳ ಅಧ್ಯಕ್ಷ ಶಿವದಾಸ್, ಜಿಲ್ಲಾ ಯುವ ಘಟಕ ಉಪಾಧ್ಯಕ್ಷ ಎಚ್.ಸಿ.ಮೂರ್ತಿ, ಕಾರ್ಯದರ್ಶಿ ಕೆ.ಡಿ.ಮಹದೇವ್, ತಾಲೂಕು ಘಟಕ ಉಪಾಧ್ಯಕ್ಷ ರಿಜ್ವಾನ್, ಸಂಘಟನಾ ಕಾರ್ಯದರ್ಶಿ ಸರ್ಕಲ್ ಮಂಜು,
ಕುಶಾಲನಗರ ನಗರ ಘಟಕ ಅಧ್ಯಕ್ಷ ವಿನಾಯಕ, ಪ್ರಮುಖರಾದ ರವಿ ಅಜ್ಜಳ್ಳಿ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!