ಕ್ರೀಡೆ

ಕುಶಾಲನಗರದ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದಲ್ಲಿ ತಾಲೂಕು ಮಟ್ಟದ ಆಟೋಟ ಸ್ಪರ್ಧೆ

ಕುಶಾಲನಗರ, ನ 21:

ಕುಶಾಲನಗರದ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಸಮುದಾಯ ಬಾಂಧವರಿಗೆ ಕುಶಾಲನಗರ ತಾಲೂಕು ಮಟ್ಟದ ಆಟೋಟ ಸ್ಪರ್ಧೆ ಏರ್ಪಡಿಸಲಾಗಿತ್ತು.
ಕುಶಾಲನಗರದ ಸಂಘದ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ಆಟೋಟ ಸ್ಪರ್ಧೆಗೆ ಕೊಡಗು ವಿದ್ಯಾಭಿವೃದ್ದಿ ಸಂಘದ ನಿರ್ದೇಶಕರಾದ ಜಗದೀಶ್ ಮತ್ತು ಅಶೋಕ್ ಚಾಲನೆ ನೀಡಿದರು.
ಕುಶಾಲನಗರ ಸಂಘದ ಅಧ್ಯಕ್ಷ ಕೆ.ಎಸ್.ರಾಜಶೇಖರ್ ಅಧ್ಯಕ್ಷತೆಯಲ್ಲಿ ಎರಡು ದಿನಗಳ‌ ಕಾಲ ನಡೆದ ಸ್ಪರ್ಧೆಯಲ್ಲಿ ರಂಗೋಲಿ, ಚನ್ನೆಮಣೆ, ಕೇರಂ, ಚೆಸ್, ಚೌಕಾಬಾರ, ಪಗಡೆ ಮತ್ತಿತರ ಗ್ರಾಮೀಣ ಕ್ರೀಡೆಗಳ ನಡೆದವು.
ತಾಲೂಕು‌ ಮಟ್ಟದಲ್ಲಿ‌ ವಿಜೇತರಾದವರು ಮಡಿಕೇರಿಯಲ್ಲಿ ವಾರ್ಷಿಕೋತ್ಸವ ಸಂದರ್ಭ ನಡೆಯುವ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಈ ಸಂದರ್ಭ ಸಂಘದ ಕಾರ್ಯದರ್ಶಿ ಬಿ.ಎಸ್.ಅನಿಲ್, ಖಜಾಂಚಿ ಕೆ.ಶ್ರೀದೇವಿ ವಿ.ರಾವ್, ಪ್ರಮುಖರಾದ ಜಿ.ಎಲ್.ನಾಗರಾಜ್, ಜಯಪ್ರಕಾಶ್, ರಮಾ ವಿಜಯೇಂದ್ರ, ರಜನಿ ಪ್ರದೀಪ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!