ಕುಶಾಲನಗರ, ನ 15:
ಸೋಮವಾರಪೇಟೆ ತಾಲೂಕು ಕರ್ನಾಟಕ ಮೂಲ ಅದಿವಾಸಿಗಳ ರಕ್ಷಣಾ ವೇದಿಕೆ ವತಿಯಿಂದ ಕುಶಾಲನಗರದ ವಾಲ್ಮೀಕಿ ಭವನದಲ್ಲಿ ಮಂಗಳವಾರ ಆದಿವಾಸಿ ಕ್ರಾಂತಿಕಾರಿ ಬಿರ್ಸಮುಂಡಾ ಅವರ 147ನೇ ಜಯಂತಿ ಆಚರಿಸಲಾಯಿತು.
ವೇದಿಕೆಯ ತಾಲೂಕು ಅಧ್ಯಕ್ಷ ಜೆ.ಕೆ.ರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವೇದಿಕೆ ರಾಜ್ಯ ನಿರ್ದೇಶಕ ಬಿ.ಕೆ.ಮೋಹನ್ ಮುಖ್ಯ ಭಾಷಣ ಮಾಡಿದರು.
ಈ ಸಂದರ್ಭ ವೇದಿಕೆ ಪ್ರಮುಖರಾದ ಜೆ.ಕೆ.ಪ್ರಕಾಶ್, ಕೆ.ಆರ್.ರವಿ, ಸ್ವಾಮಿ, ಗಿರಿಜನ ಮುಖಂಡ ಡಿ.ಆರ್.ಪ್ರಭಾಕರ್, ಆದಿವಾಸಿ ಮುಖಂಡ ನಾಗಣ್ಣ, ಈರಣ್ಣ ಸುಬ್ರಮಣಿ, ಧರ್ಮಪ್ಪ, ಭರಮಣ್ಣ ಮತ್ತಿತರರು ಇದ್ದರು.
Back to top button
error: Content is protected !!