ಸಭೆ

ಕುಶಾಲನಗರ ತಾಲೋಕು ಕರವೇ ಸಾಮಾನ್ಯ ಸಭೆ

ಕುಶಾಲನಗರ, ಆ 01: ದಿನಾಂಕ 1/8/26ರಂದು ಕುಶಾಲನಗರ ಪ್ರವಾಸಿ ಮಂದಿರದಲ್ಲಿ ಕುಶಾಲನಗರ ತಾಲೋಕು ಕರವೇ ಸಾಮಾನ್ಯ ಸಭೆ ತಾಲೋಕು ಅಧ್ಯಕ್ಷರಾದ ಅಣ್ಣಯ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ನೂತನ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆಮಾಡಿ ಸಮಿತಿ ರಚನೆ ಮಾಡಿ ತಾಲೋಕು ಅಧ್ಯಕ್ಷರಾಗಿ ಅಣ್ಣಯ್ಯನವರನ್ನು ಮುದುವರಿಯಲು ಸಭೆ ಪ್ರಸ್ತಾವನೆಯನ್ನು ಅಂಗೀಕರಿಸಿ ಅನುಮೋಡಿಸಿತು,ನಂತರ ಮುಂದೆ ನಿರ್ವಹಿಸ ಬೇಕಾದ ಕಾರ್ಯಗಳನ್ನು ಪಟ್ಟಿಮಾಡಿ ಸಿದ್ದಪಡಿಸಿ ಚರ್ಚಿಸಲಾಯಿತ್ತು. ಮಹಿಳಾ ತಾಲೋಕು ಅಧ್ಯಕ್ಷರು ಶ್ರೀಮತಿ ರೂಪಾ ಗಣೇಶ್ ಪ್ರಸ್ತಾವಿಕ ಮಾತನಾಡಿದರು.

ಜಿಲ್ಲಾ ಮಹಿಳಾ ಅಧ್ಯಕ್ಷರು ಶ್ರೀಮತಿ ಜ್ಯೋತಿ ಕುದಪಜೆ ಸಂಘಟನೆ ಬಲಪಡಿಸಿ. ಜನರ ಹಾಗೂ ಕನ್ನಡಪರ ಹೋರಾಟಕ್ಕೆ ಸಿದ್ದರಾಗಲು ಕರೆ ನೀಡಿದರು ಸಭೆಯಲ್ಲಿ ಮಡಿಕೇರಿ ತಾಲೋಕು ಅಧ್ಯಕ್ಷರಾದ ಪ್ರವೀಣ್ ಡಿಂಗ. ಸೋಮವಾರಪೇಟೆ ತಾಲೋಕು ಅಧ್ಯಕ್ಷರಾದ ಸಂತೋಷ್. ಜಿಲ್ಲಾ ಉಪಾಧ್ಯಕ್ಷರಾದ ರಾಜೇಶ್. ಜಿಲ್ಲಾ ಸಂಚಾಲಕರಾದ ಗೋವಿಂದರಾಜದಾಸ್.ಜಿಲ್ಲಾ ಪ್ರದಾನ ಕಾರ್ಯದರ್ಶಿ ಶ್ರೀಮತಿ ದಿವ್ಯ ದೇವಾಂಗ ಜಿಲ್ಲಾ ಉಪಾಧ್ಯಕ್ಷರಾದ ಸುಪ್ರಿತಾ. ಜಿಲ್ಲಾ ಕಾರ್ಯದರ್ಶಿ ಪೂರ್ಣಿಮಾ.ಸೋಮವಾರಪೇಟೆ ತಾಲೋಕು ಅಧ್ಯಕ್ಷರಾದ ಶ್ರೀಮತಿ ಆಶಾ. ಪ್ರಧಾನ ಕಾರ್ಯದರ್ಶಿ ಪ್ರೇಮ.ಸಂಘಟನಾ ಕಾರ್ಯದರ್ಶಿ ಶಶಿಕಲಾ ಕುಶಾಲನಗರ ತಾಲೋಕು ಗೌರವ ಅಧ್ಯಕ್ಷ ಧನರಾಜ್,ಪ್ರಧಾನ ಕಾರ್ಯದರ್ಶಿ ಕುಮಾರ್ ದೇವಾಂಗ ಖಜಾಂಜಿ ರೋನಾಲ್ಡ್ ಕಾರ್ಯದರ್ಶಿ. ರಾಕೇಶ್ ,ಸಂಘಟನಾ ಕಾರ್ಯದರ್ಶಿ ಶಿವಕುಮಾರ್. ಮಹಿಳಾ ಕಾರ್ಯದರ್ಶಿ ಸಿಂಧು ನಗರ ಅಧ್ಯಕ್ಷರು ಅನಿತಾ. ತಾಲೋಕು ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು. ದಿವ್ಯ ದೇವಾಂಗ ಕಾರ್ಯಕ್ರಮ ನಿರೂಪಿಸಿದರು. ಎಲ್ಲರಿಗೂ ತಾಲೋಕು ಅಧ್ಯಕ್ಷರು ರೂಪಾ ಗಣೇಶ್ ಸಹಿತಿಂಡಿ ನೀಡಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!