ಕುಶಾಲನಗರದ, ಅ 20: ಕುಶಾಲನಗರ ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ಕುಶಾಲನಗರ ತಾಲೂಕು ಮಟ್ಟದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಆಚರಿಸುವ ಸಂಬಂಧ ತಾಲೂಕು ಮಟ್ಟದ ಅಧಿಕಾರಿಗಳು, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಸಂಘಟನೆಗಳು, ಸಂಘಸಂಸ್ಥೆಗಳ ಪ್ರಮುಖರ ಪೂರ್ವಭಾವಿ ಸಿದ್ದತಾ ಸಭೆ ಕುಶಾಲನಗರದ ವಾಸವಿ ಸಭಾಂಗಣದಲ್ಲಿ ಗುರುವಾರ ನಡೆಯಿತು.
ಕುಶಾಲನಗರ ತಾಲೂಕು ತಹಶೀಲ್ದಾರ್ ಟಿ.ಎಂ.ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಯನ್ನು ಕುಶಾಲನಗರದ ಜಿಎಂಪಿ ಶಾಲಾ ಮೈದಾನದಲ್ಲಿ ಅದ್ದೂರಿಯಾಗಿ ಹಮ್ಮಿಕೊಳ್ಳುವ ಬಗ್ಗೆ ಚರ್ಚೆ ನಡೆಯಿತು. ಕನ್ನಡಪರ ಸಂಘಟನೆಗಳು, ಸಂಘಸಂಸ್ಥೆಗಳ ಸಹಕಾರದೊಂದಿಗೆ ಕನ್ನಡ ರಾಜ್ಯೋತ್ಸವ ಆಚರಿಸುವ ಸಂಬಂಧ ಸಲಹೆ ಸೂಚನೆಗಳು ಪಡೆಯಲಾಯಿತು.
ಕುಶಾಲನಗರ ಪಪಂ ಅಧ್ಯಕ್ಷರಾದ ಬಿ.ಜೈವರ್ಧನ್, ಉಪಾಧ್ಯಕ್ಷೆ ಸುರಯ್ಯಭಾನು, ಕಸಾಪ ತಾಲೂಕು ಅಧ್ಯಕ್ಷ ಕೆ.ಎಸ್.ಮೂರ್ತಿ, ರಕ್ಷಣಾ ವೇದಿಕೆಯ ವೆಂಕಟೇಶ್ ಪೂಜಾರಿ, ಪಿ.ಕೆ.ಜಗದೀಶ್, ಅಣ್ಣಯ್ಯ, ಕಾವಲುಪಡೆಯ ಕೃಷ್ಣ, ಡಿಎಸ್ ಎಸ್ ನ ಕೆ.ಬಿ.ರಾಜು, ಬೀದಿಬದಿ ವ್ಯಾಪಾರಿಗಳ ಸಂಘಟನೆಯ ಜಗದೀಶ್, ಎಪಿಸಿಎಂಎಸ್ ನ ಕುಮಾರಪ್ಪ, ಆರೋಗ್ಯ ಇಲಾಖೆಯ ಶಾಂತಿ, ಶಿಕ್ಷಣ ಇಲಾಖೆಯ ಉ.ರಾ.ನಾಗೇಶ್, ಪುಷ್ಪ, ಯುಜಿಡಿ ಆನಂದ್, ತೋಟಗಾರಿಕಾ ಇಲಾಖೆಯ ವರದರಾಜು, ಕಂದಾಯ ಇಲಾಖೆಯ ಮಧುಸೂದನ್, ಸಂತೋಷ್, ಚೇತನ್, ಸ್ವಾತಿ ಮತ್ತಿತರರು ಇದ್ದರು.
ಬೈಚನಹಳ್ಳಿ ಮಾರಮ್ಮ ದೇವಾಲಯದಿಂದ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳುವ ಸಂಬಂಧ ಚರ್ಚೆ ನಡೆಯಿತು.
Back to top button
error: Content is protected !!