ಪ್ರಕಟಣೆ

ಡಿ.11 ರಂದು ‌ಕೂಡಿಗೆಯಲ್ಲಿ ಹಾಲು ಉತ್ಪಾದಕರ ಸಂಘಗಳ ಅಧ್ಯಕ್ಷರುಗಳಿಗೆ ತರಬೇತಿ ಕಾರ್ಯಗಾರ.

ಕೂಡಿಗೆ, ಡಿ. 9: ಕರ್ನಾಟಕ ಸಹಕಾರ ಮಹಾಮಂಡಳ ನಿ.ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯುನಿಯನ್ ನಿ.‌ಮಡಿಕೇರಿ ಇವರ ಸಂಯುಕ್ತಾಶ್ರಯದಲ್ಲಿ ಡಿ. 11 ರಂದು ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ನಿರ್ದೇಶಕರುಗಳಿಗೆ ಸಹಕಾರ ಸಂಘಗಳ ಮೇಲ್ವಿಚಾರಣೆ, ನಿರ್ವಹಣೆ, ಸಹಕಾರ ಕಾಯ್ದೆ- ಕಾನೂನುಗಳ ಬಗ್ಗೆ, ರಾಸುಗಳ ನಿರ್ವಹಣೆ ಕುರಿತು ವಿಶೇಷ ಶಿಕ್ಷಣ ಕಾರ್ಯಕಾರವು ಕೂಡಿಗೆ ಸರಕಾರಿ ಕೃಷಿ ತರಬೇತಿ ಕೇಂದ್ರದ ಸಭಾಂಗಣದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಹಾಸನ ಹಾಲು ಒಕ್ಕೂಟದ ಜಿಲ್ಲಾ ನಿರ್ದೇಶಕ, ರಾಮೇಶ್ವರ ಕೂಡುಮಂಗಳೂರು ಸಹಕಾರ ಸಂಘದ ಅಧ್ಯಕ್ಷ ಕೆ.ಕೆ.ಹೇಮಂತ್ ಕುಮಾರ್ ನೆರವೇರಿಸಿದರು. ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಸಹಕಾರ ಯುನಿಯನ್ ನಿಯಮಿತದ ಅಧ್ಯಕ್ಷ ಪಿ.ಯು. ರಾಬಿನ್ ದೇವಯ್ಯ ವಹಿಸುವರು, ಮುಖ್ಯ ಅತಿಥಿಗಳಾಗಿ ಕೊಡಗು ಜಿಲ್ಲಾ ಸಹಕಾರ ಯುನಿಯನ್ ಉಪಾಧ್ಯಕ್ಷ ಹೆಚ್.ಕೆ. ಮಾದಪ್ಪ, ಜಿಲ್ಲಾ ಸಹಕಾರ ಯುನಿಯನ್ ನ ನಿರ್ದೇಶಕರಾದ ಎ.ಕೆ. ಮನು ಮುತ್ತಪ್ಪ, ಕೆ.ಎಂ .ತಮ್ಮಯ್ಯ, ವಿ.ಕೆ. ಅಜೀತ್ ಕುಮಾರ್, ಎ‌. ಎಸ್. ಶ್ಯಾಮ್ ಚಂದ್ರ,ಕೆ.ಟಿ. ಪರಮೇಶ್,ಬಲ್ಲಾರಂಡ ಮಣಿ ಉತ್ತಪ್ಪ, ವಿ. ಸಿ. ಕುಶಾಲಪ್ಪ, ಎಂ.ಟಿ. ಸುಬ್ಬಯ್ಯ, ಎ.ಎಂ. ಮುತ್ತಪ್ಪ,ಪಿ.ಎನ್ ಚಂದ್ರಪ್ರಕಾಶ್, ವಿ.ಸಿ.ಅಮೃತ್, ಎಸ್. ಆರ್ ಸುನಿಲ್ ರಾವ್ ,ಹೆಚ್.ಎಂ . ರಮೇಶ್, ಸಹಕಾರ ಸಂಘಗಳ ಉಪ ನಿರ್ಭಂಧಕ ಹೆಚ್. ಡಿ. ರವಿಕುಮಾರ್, ಹಾಸನ ಹಾಲು ಒಕ್ಕೂಟದ ಶೇಖರಣಾ ವಿಭಾಗದ ಪ್ರಧಾನ ವ್ಯವಸ್ಥಾಪಕ ಕೆ. ರೂಪೇಶ್ ಕುಮಾರ್, ಸಹಕಾರ ಸಂಘದ ನಿವೃತ್ತ ಪ್ರಾಂಶುಪಾಲರಾದ ಎಂ‌.ಎಂ. ಶ್ಯಾಮಲಾ, ಹಿರಿಯ ಪಶು ವೈದ್ಯಾಧಿಕಾರಿ ಡಾ. ಶ್ರೀ ದೇವ್, ಹಾಸನ ಹಾಲು ಒಕ್ಕೂಟದ ವಿಸ್ತಾರಣಾಧಿಕಾರಿ ಬಿ. ವಿ. ವೀಣಾ ಭಾಗವಹಿಸುವವರು ಎಂದು ಕೊಡಗು ಜಿಲ್ಲಾ ಸಹಕಾರ ಯುನಿಯನ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಯೋಗೇಂದ್ರ ನಾಯಕ್ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!