ಕುಶಾಲನಗರ, ಡಿ 10: ಕುಶಾಲನಗರ ಗೌಡ ಸಮಾಜದ ಆಶ್ರಯದಲ್ಲಿ ಈ ತಿಂಗಳ 14ರಂದು ಹುತ್ತರಿ ಹಬ್ಬ ಆಚರಣೆ ನಡೆಯಲಿದೆ ಎಂದು ಕುಶಾಲನಗರ ಗೌಡ ಸಮಾಜದ ಅಧ್ಯಕ್ಷರಾದ ಚಿಲ್ಲನ ಗಣಿ ಪ್ರಸಾದ್ ತಿಳಿಸಿದ್ದಾರೆ.
ಅವರು ಸಮಾಜದ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ಗೌಡ ಸಮಾಜ, ಗೌಡ ಯುವಕ ಸಂಘ ಗೌಡ ಮಹಿಳಾ ಸ್ವಸಹಾಯ ಸಂಘ, ನಿವೃತ್ತ ಗೌಡ ಸೈನಿಕರ ಒಕ್ಕೂಟ ಸೇರಿದಂತೆ ಸಮಾಜದ ವಿವಿಧ ಅಂಗ ಸಂಸ್ಥೆಗಳ ಸಹಯೋಗದೊಂದಿಗೆ ಅದ್ದೂರಿ ಹುತ್ತರಿ ಹಬ್ಬ ಆಚರಣೆ ಮಾಡಲಾಗುವುದು.
ಸಂಜೆ 6.30ಕ್ಕೆ ಗೌಡ ಸಮಾಜದಲ್ಲಿ ಸೇರಿ ಫಲಹಾರ, ನಂತರ 7.50ಕ್ಕೆ ನೆರೆಕಟ್ಟುವುದು ತದನಂತರ ಗಣಪತಿ ದೇವಾಲಯಕ್ಕೆ ಮೆರವಣಿಗೆ ಮೂಲಕ ತೆರಳಿ ಪೂಜೆ ಸಲ್ಲಿಸಲಾಗುವುದು.
8:50ಕ್ಕೆ ಹಾರಂಗಿ ರಸ್ತೆಯಲ್ಲಿರುವ ಗೌಡ ಯುವಕ ಸಂಘ ಕಟ್ಟಡದ ಬಳಿ ಗದ್ದೆಯಿಂದ ಕದಿರು ತೆಗೆಯುವ ಕಾರ್ಯಕ್ರಮ ನಡೆಯಲಿದೆ.
ಸ್ಥಳದಲ್ಲಿ ಸಮುದಾಯ ಬಾಂಧವರಿಗೆ, ಸಾರ್ವಜನಿಕರಿಗೆ ಕದಿರು ವಿತರಣೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಡಿ.15 ರಂದು ಸಮಾಜದ ಮಹಾಸಭೆ ಹಾಗೂ ಅರೆಭಾಷೆ ದಿನಾಾಚರಣೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಸಂಘದಿಂದ ಬಸವನ ಹಳ್ಳಿಯಲ್ಲಿ ಸುಸಜ್ಜಿತ ಕಲ್ಯಾಣ ಮಂಟಪ, ಲಾಡ್ಜ್, ಕಾಟೆಜಸ್ ನಿರ್ಮಾಣ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಗೋಷ್ಠಿಯಲ್ಲಿ ಸಮಾಜದ ಉಪಾಧ್ಯಕ್ಷರಾದ ಸೆಟ್ಟೇಜನ ದೊರೆಗಣಪತಿ, ಕುಲ್ಲಚೆಟ್ಟಿರ ಕಾಶಿಪೂವಯ್ಯ, ಗೌಡ ಯುವಕ ಸಂಘದ ಅಧ್ಯಕ್ಷರಾದ ಕೊಡಗನ ಹರ್ಷ, ಸಮಾಜದ ಕಾರ್ಯದರ್ಶಿ ಕುಲ್ಲಚನ ಹೇಮಂತ್, ದಬ್ಬಡ್ಕ ಡಾಟಿ ಶಾಂತಕುಮಾರಿ, ಗೌಡ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷ ಚೆರಿಯಮನೆ ಋಷಿ ಹರೀಶ್, ನಿವೃತ್ತ ಗೌಡ ಸೈನಿಕರ ಒಕ್ಕೂಟದ ಅಧ್ಯಕ್ಷರಾದ ದೇವಜನ ಚಿನ್ನಪ್ಪ ಇದ್ದರು.
Back to top button
error: Content is protected !!