ಕುಶಾಲನಗರ, ಸೆ 23: ಊರಿನ ಶುಚಿತ್ವದ ಬಗ್ಗೆ ಸಾರ್ವಜನಿಕರು ಜವಬ್ದಾರಿಯುತವಾಗಿ ವರ್ತಿಸಿದರೆ ಇಡೀ ಊರು ಶುಚಿಯಾಗಿರುತ್ತದೆ ಎಂದು ಕುಶಾಲನಗರ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಎಸ್ ಆರ್ ಗಣೇಶ್ ತಿಳಿಸಿದರು.ಅವರು ನಗರದ ಎ.ಪಿ.ಸಿ.ಎಂ.ಎಸ್.ಸಭಾಂಗಣದಲ್ಲಿ ಪ.ಪಂ.ವತಿಯಿಂದ ನಡೆದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು ಪೌರ ಕಾರ್ಮಿಕರೂ ಸಹ ಜನಪ್ರತಿನಿಧಿಗಳೊಂದಿಗೆ ವೇದಿಕೆ ಹಂಚಿಕೊಳ್ಳಲು ಡಾ.ಬಿ.ಆರ್.ಅಂಬೇಡ್ಕರ್ ರವರು ನೀಡಿದ ಸಮಾನತೆಯ ಅಧಿಕಾರ.ಸಾರ್ವಜನಿಕರಿಗೆ ತೊಂದರೆಯಾಗಬಾರದೆಂಬ ಕಾರಣಕ್ಕೆ ಒಂದು ದಿನವೂ ರಜೆ ಪಡೆಯದೆ ಕಾರ್ಯನಿರ್ವಹಿಸುತ್ತಿದ್ದೇವೆ.ವರ್ಷವಿಡೀ ಕಾರ್ಯನಿರ್ವಹಿಸುವ ನಾವು ವರ್ಷಕ್ಕೊಂದು ಬಾರಿ ನಡೆಯುವ ನಡೆಯುವ ಪೌರಕಾರ್ಮಿಕರ ದಿನಾಚರಣೆಗೆ ಕೆಲವು ಪಟ್ಟಣ ಪಂಚಾಯಿತಿ ಸದಸ್ಯರು ಹಾಜರಾಗದೇ ಇರುವುದು ಬೇಸರ ತಂದಿದೆ ಎಂದರು ಕೆಲವು ಪೌರ ಕಾರ್ಮಿಕರಿಗೆ ಇನ್ನೂ ಖಾಯಂ ಆಗಿಲ್ಲ ಸರ್ಕಾರ ಹಲವು ವರ್ಷಗಳಿಂದ ಕಡಿಮೆ ಸಂಬಳಕ್ಕೆ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರನ್ನು ಸರ್ಕಾರ ಶೀಘ್ರ ಖಾಯಂ ಗೊಳಿಸಬೇಕೆಂದು ಆಗ್ರಹಿಸಿದರು.
ಪ.ಪಂ.ಅಧ್ಯಕ್ಷ ಜೈವರ್ಧನ್ ಮಾತನಾಡಿ ಹಿಂದೆ ವೃತ್ತಿ ಆಧಾರದ ಮೇಲೆ ಜಾತಿ ಪದ್ದತಿ ಇತ್ತು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸಂಭ್ರಮ ಸಿಗಲೆಂಬ ಉದ್ದೇಶದಿಂದ ಪೌರ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ತಮ್ಮ ಕುಟುಂಬ ವನ್ನು ಬದಿಗಿಟ್ಟು ಊರಿನ ಸ್ವಚ್ಛತೆಗೆ ಆದ್ಯತೆ ಕೊಡುವ ಪೌರಕಾರ್ಮಿಕರು ಊರಿನ ಸ್ವಚ್ಛತಾ ಸೈನಿಕರು ಎಂದು ಕೊಂಡಾಡಿದರು.ಪೌರ ಕಾರ್ಮಿಕರಿಗೆ ಸರ್ಕಾರದ ಸವಲತ್ತುಗಳನ್ನು ಸಮಯಕ್ಕೆ ಸರಿಯಾಗಿ ನೀಡಲಾಗುತ್ತಿದೆ ಪೌರ ಕಾರ್ಮಿಕರಿಗೆ ಕ್ಯಾಶ್ ಲೆಸ್ ಜೀವ ವಿಮೆ ಸವಲತ್ತುಗಳನ್ನು ಸರ್ಕಾರ ನೀಡುತ್ತಿದೆ ಅನಾರೋಗ್ಯ ದಿಂದ ಬಳಲುವ ಪೌರ ಕಾರ್ಮಿಕರು 3 ಲಕ್ಷದ ವರೆಗೂ ವೈಧ್ಯಕೀಯ ವೆಚ್ಚ ಸೌಲಭ್ಯವನ್ನು ಪಡೆಯಬಹುದು ಪೌರಕಾರ್ಮಿಕರಿಗೆ ವಿಶೇಷ ಭತ್ಯೆ ನೀಡಲಾಗಿತ್ತಿದೆ ವಸತಿರಹಿತ ಪೌರ ಕಾರ್ಮಿಕರಿಗೆ ಆದಷ್ಟು ಶೀಘ್ರ ವಸತಿ ಸೌಕರ್ಯ ಕಲ್ಪಿಸಿಕೊಡಲಾಗುವುದು.ಎಂದರು.
ದಿನಾಚರಣೆಯ ಪ್ರಯುಕ್ತ ಪೌರಕಾರ್ಮಿಕರಿಗೆ ನಡೆದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು.
ಪೌರಕಾರ್ಮಿಕರ ಸಂಘದಿಂದ ಪ.ಪಂ.ಅಧ್ಯಕ್ಷ ಜೈವರ್ಧನ್ ಮತ್ತು ಆರೋಗ್ಯ ನಿರೀಕ್ಷಕ ಉದಯಕುಮಾರ್ ರವರನ್ನು ಸನ್ಮಾನಿಸಿದರೆ ಪ.ಪಂ.ವತಿಯಿಂದ ಎಲ್ಲಾ ಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಸುರಯ್ಯಬಾನು ಸದಸ್ಯರುಗಳಾದ ಜಯಲಕ್ಷ್ಮಮ್ಮ ಜಯಲಕ್ಷ್ಮಿ. ರೇಣುಕಾ.ನಾರಾಯಣ್.ಶೇಕ್ ಕಲೀಂ.ಸುಂದರೇಶ್.ಸುರೇಶ್.ತಿಮ್ಮಪ್ಪ.ಕೆ.ಜಿ.ಮನು.ಶೈಲಾ.ಮೇಸ್ತ್ರಿಗಳಾದ ಮೋಹನ್ ಕುಮಾರ್.ಗಣೇಶ್.ಪೌರ ಕಾರ್ಮಿಕರು.ಸಿಬ್ಬಂದಿಗಳು ಸೇರಿದಂತೆ ಇತರರು ಹಾಜರಿದ್ದರು.
Back to top button
error: Content is protected !!