ದೇವಾಲಯ

ಕಾವೇರಿ ಸಂಕ್ರಮಣ ಅಂಗವಾಗಿ ಬೆಳಗ್ಗೆ 10 ರಿಂದ ಸಂಜೆ 7 ಗಂಟೆ ತನಕ ಕಾರ್ಯಕ್ರಮ

ಕುಶಾಲನಗರ, ಅ 17: ಕಾವೇರಿ ಸಂಕ್ರಮಣ ಹಿನ್ನೆಲೆಯಲ್ಲಿ
ಬಾರವಿ ಕಾವೇರಿ ಕನ್ನಡ ಸಂಘದ ವತಿಯಿಂದ 14ನೇ ವರ್ಷದ ಕಾವೇರಿ ತೀರ್ಥ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ಭಾನುವಾರ ಹಮ್ಮಿಕೊಳ್ಳಲಾಗಿದೆ.
ಕುಶಾಲನಗರ-ಕೊಪ್ಪ ಗಡಿಭಾಗದ ಕಾವೇರಿ ಪ್ರತಿಮೆ ವೃತ್ತದಲ್ಲಿ ತೀರ್ಥ ವಿತರಣೆ ಮತ್ತು ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ಈಗಾಗಲೆ ಕಾರ್ಯಕ್ರಮದ ಸಕಲ‌ ಸಿದ್ದತೆ ನಡೆಸಲಾಗಿದ್ದು, ತಲಕಾವೇರಿ ಯಿಂದ ತೀರ್ಥ ತರುವ ವಾಹನಕ್ಕೆ ಪೂಜೆ ನೆರವೇರಿಸಿ ಚಾಲನೆ‌ ನೀಡಲಾಯಿತು.
ಈ ಸಂದರ್ಭ ಮಾತನಾಡಿದ ಸಂಘದ ಪ್ರಮುಖರಾದ ರವೀಂದ್ರ ಪ್ರಸಾದ್ ಅವರು, ಕಾವೇರಿ ಸಂಕ್ರಮಣ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ತೀರ್ಥ ವಿತರಣೆ ಮತ್ತು ಅನ್ನಸಂತರ್ಪಣೆ ಕಾರ್ಯ ಬೆಳಗಿನಿಂದ ಸಂಜೆ ತನಕ ನೆರವೇರಿಸಲಾಗುವುದು. ಇದರೊಂದಿಗೆ ಸೋಮವಾರಪೇಟೆ ಕಾವೇರಿ ವೃತ್ತ ಮತ್ತು ಮರಗೋಡಿನಲ್ಲಿ ಕೂಡ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ಮೈಸೂರು ಜಿಲ್ಲಾ ಬಿಜೆಪಿ ಮುಖಂಡ ಚಂದ್ರು ಬೆಮ್ಮತ್ತಿ‌ ಮಾತನಾಡಿ, ಕಾವೇರಿ ಕನ್ನಡ ಸಂಘದಿಂದ ತೀರ್ಥ ವಿತರಣೆಗೆ ಈಗಾಗಲೆ ಸಕಲ ಸಿದ್ದತೆ ನಡೆಸಲಾಗಿದ್ದು ಕೊಡಗು ಮೈಸೂರು ಎರಡೂ‌ ಭಾಗದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ‌ ಮಾಡಿದರು.

ಈ ಸಂದರ್ಭ ಸಂಘದ ಪ್ರಮುಖರಾದ ಬಬೀಂದ್ರ ಪ್ರಸಾದ್, ರವೀಂದ್ರ ಪ್ರಸಾದ್, ಮಹಾನ್,
ಜಬೀಬುಲ್ಲಾ, ಹೇಮಂತ್ ರಾವ್, ಅಬೀಬ್ ರೆಹಮಾನ್, ಕಿಶನ್ ಕಾರ್ಯಪ್ಪ, ವಿನಿತ್ ಕುಮಾರ್, ರವಿಕಿರಣ್, ಅಜೀಜ್, ರಘು‌, ರಾಜ ಕಡಗದಾಳು ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!