ಕಾರ್ಯಕ್ರಮ

ಕುಶಾಲನಗರದಲ್ಲಿ ತರಬೇತಿ ಕಾರ್ಯಾಗಾರ

ಕುಶಾಲನಗರ, ಜು 17: ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ವತಿಯಿಂದ ಮತದಾರ ಮತಗಟ್ಟೆಯ ಅಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಕುಶಾಲನಗರ ತಾಲೂಕಿನ ಎಪಿಎಂಎಸ್ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ತಾಲೂಕಿನ ಎಲ್ಲಾ ಮತಗಟ್ಟೆ BLO (ಬೂತ್ ಮಟ್ಟದ ಅಧಿಕಾರಿಗಳಿಗೆ) ಒಂದು ದಿನದ ತರಬೇತಿಯನ್ನು ಮಾನ್ಯ ಜಿಲ್ಲಾಧಿಕಾರಿಗಳ ಆದೇಶದ ಅನುಸಾರ ನೀಡಲಾಯಿತು. ಈ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾದ ಎನ್ ವೆಂಕಟನಾಯ್ಕ್ ಚುನಾವಣೆಯ ಮಹತ್ವ ಮತ್ತು ಚುನಾವಣೆ ಕೆಲಸ ಹೇಗೆ ಮಾಡಬೇಕು ಮತದಾರರ ಪಟ್ಟಿಯನ್ನು ಹೇಗೆ ತಯಾರಿಸಬೇಕು ಮತ್ತು ಮತದಾರ ಪಟ್ಟಿಯನ್ನು ತೀವ್ರ ಪರಿಷ್ಕರಣೆ ಹೇಗೆ ಮಾಡಬೇಕು ಎಂಬುದರ ಬಗ್ಗೆ ಬಿ ಎಲ್ ಓ ಗಳಿಗೆ ಮಾಹಿತಿ ನೀಡಿದರು. ತರಬೇತಿದಾರರಿಂದ ಗುಂಪು ಚಟುವಟಿಕೆಗಳ ಮೂಲಕ ಅರಿವು ಮೂಡಿಸುವುದು. ಚರ್ಚೆ, ಬೀದಿ ನಾಟಕದ ಮೂಲಕ ಮತದಾನದ ಬಗ್ಗೆ ಅರಿವು ಮೂಡಿಸುವುದು ಮುಂತಾದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ತಾಲೂಕು ಆಡಳಿತದ ಚುನಾವಣಾ ಅಧಿಕಾರಿಗಳು,ಜಿಲ್ಲಾ ಚುನಾವಣಾ ಅಧಿಕಾರಿಗಳು ಭಾಗವಹಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!