ಪರಿಸರ

ಕುಶಾಲನಗರ ರೋಟರಿ ಮತ್ತು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯಿಂದ ಗಿಡ ನೆಡುವ ಕಾರ್ಯಕ್ರಮ

ಕುಶಾಲನಗರ,ಸೆ 05: ಕುಶಾಲನಗರ ರೋಟರಿ ಆಶ್ರಯದಲ್ಲಿ ಮತ್ತು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಸಹಯೋಗದೊಂದಿಗೆ ಗಿಡ ನೆಡುವ ಕಾರ್ಯಕ್ರಮ ನಡೆಯಿತು.
ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ರೋಟರಿಯ ,’ಹಸಿರೇ ಉಸಿರು’ ಯೋಜನೆಯ ಅಡಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಇನ್ಸ್ಪೆಕ್ಟರ್ ದಿನೇಶ್ ಕುಮಾರ್ ಚಾಲನೆ ನೀಡಿ ಮಾತನಾಡಿದರು.
ಉತ್ತಮ ಪರಿಸರ ನಿರ್ಮಾಣ ಮಾಡಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದರು.
ಹಸಿರೇ ಉಸಿರು ಯೋಜನೆಯ ಚೇರ್ಮನ್ ಎಸ್ ಕೆ ಸತೀಶ್ ಮಾತನಾಡಿ ರೋಟರಿ ಸಂಸ್ಥೆ ಮೂಲಕ ಈ ಸಾಲಿನಲ್ಲಿ ಪರಿಸರ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದ್ದು ಶಾಲಾ-ಕಾಲೇಜು ವಿದ್ಯಾರ್ಥಿಗಳ ಮೂಲಕ ಪರಿಸರ ಸಂರಕ್ಷಣೆಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಸಂಚಾಲಕರಾದ ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರತಿಯೊಬ್ಬರು ತಮ್ಮ ಹುಟ್ಟು ಹಬ್ಬಕ್ಕೆ ಒಂದು ಗಿಡ ನೆಟ್ಟು ಬೆಳೆಸುವ ಹವ್ಯಾಸದಲ್ಲಿ ತೊಡಗಿಸಿಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ರೋಟರಿ ಕುಶಾಲನಗರ ಅಧ್ಯಕ್ಷರಾದ ಸಿ ಎ ರುದ್ರೇಶ್ ಪಟೇಲ್, ಕುಶಾಲನಗರ ಅರಣ್ಯ ಉಪ ವಲಯದ ಆನೆಕಾಡು ಡಿ ಆರ್ ಎಫ್ ಓ ಮಧುಕುಮಾರ್, ಕೃಷಿ ಉತ್ಪನ್ನ ಮಾರುಕಟ್ಟೆಯ ಸಹಾಯಕ ಕಾರ್ಯದರ್ಶಿ ಅನಿಲ್ ಕುಮಾರ್,
ರೋಟರಿ ಕಾರ್ಯದರ್ಶಿ ಎಂ ಯು ಅರುಣ, ಖಜಾಂಚಿ ಹೆಚ್ ಪಿ ಮಂಜುನಾಥ್, ಸಹಾಯಕ ರಾಜ್ಯಪಾಲ ರಂಗಸ್ವಾಮಿ,ಡಾ ಹರಿ ಎ ಶೆಟ್ಟಿ, ಕೃಜ್ವೆಲ್ ಕೋಟ್ಸ್, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ವನಿತಾ ಚಂದ್ರಮೋಹನ್, ಮಂಡೆಪಂಡ ಬೋಸ್ ಮೊಣ್ಣಪ್ಪ, ಧರಣಿ, ಹಾಗೂ ರೋಟರಿ ಸದಸ್ಯರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!