ಕುಶಾಲನಗರ, ಜು 12:ಭಾರತೀಯ ಶಾಲಾ ಪ್ರಮಾಣಪತ್ರ ಪರೀಕ್ಷೆಗಳ ಕೌನ್ಸಿಲ್ ಕೊಡಗು ಮತ್ತು ಮೈಸೂರು ವಲಯ 14 ಮತ್ತು 17 ವರ್ಷದೊಳಗಿನ ಅಂತರ ಶಾಲಾ ಟೆಬಲ್ ಟೆನಿಸ್ ಪಂದ್ಯಾವಳಿ ನಳಂದ ಗುರುಕುಲ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ ನಡೆಯಿತು.
ಶಾಲಾ ಪ್ರಾಂಶುಪಾಲರಾದ ಡಾ. ಅಂತೋಣಿ ರಾಜ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಳಂದ ಇಂಟರ್ ನ್ಯಾಷನಲ್ ಇಂಡಿಪೆಂಡೆಂಟ್ ಪಿಯು ಕಾಲೇಜಿನ ಪ್ರಾಂಶುಪಾಲರಾದ ಷಾಜಿ ಆಲುಂಗಲ್ ಜೋಸೆಪ್ ಪಂದ್ಯಾವಳಿ ಉದ್ಘಾಟಿಸಿದರು. ನಳಂದ ಗುರುಕುಲ ಶಿಕ್ಷಣ ಟ್ರಸ್ಟನ ವಸತಿ ನಿರ್ದೇಶಕರಾದ ನ್ಯಾಮ್ಗಿಲ್ ಎನ್ ವಿಜೇತರಿಗೆ ಬಹುಮಾನ ವಿತರಿಸಿದರು, ನಳಂದ ಸಂಸ್ಥೆ ಯ ಮಾರ್ಗದರ್ಶಕರಾದ ಎಫ್ ಎ ಎಸ್ ಸುರೇಂದರ್ ಮತ್ತು ಉದ್ಘಾಮ್ ಶಾಲೆಯ ನಿರ್ವಾಹಕರಾದ ರಾಣಾ ಅಯ್ಯಪ್ಪ ಉಪಸ್ಥಿತರಿದ್ದರು.
ಪಂದ್ಯಾವಳಿಯ ಸಮಯದಲ್ಲಿ ಚೀಫ್ ರೆಪ್ರೀ ಕೆ.ಎನ್ ಕೃಷ್ಣಮೂರ್ತಿಯವರು ಆಟಗಾರರ ಜೊತೆ ಸಮಾಲೋಚನೆ ನಡೆಸಿದರು. ರೆಫ್ರೀಗಳಾದ ಸಿ ಜೆ ಮೋಹನ್ ಮತ್ತು ಚಿರಾಗ್ ಪಂದ್ಯಾವಳಿಯನ್ನು ನಡೆಸಿ ಕೊಟ್ಟರು.
ಪ್ರಶಸ್ತಿ 14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ನಳಂದ ಗುರುಕುಲ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ನ ನಿಶಾಂತ್ ಪಿ ಗೌಡ ಚಿನ್ನದ ಪದಕ, ಭಾರ್ಗವ್ ಬೆಳ್ಳಿ ಪದಕ, ಕೌಸ್ತುಭ್ ನಾರಾಯಣ ಕಂಚಿನ ಪದಕ ಪಡೆದರು.
ಪ್ರಶಸ್ತಿ 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ನಳಂದ ಗುರುಕುಲ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ನ ಅನಿಕೇತ್ ಚೌಧರಿ ಚಿನ್ನದ ಪದಕ, ಶುಭಂ ಸಂತೋಷ್ ಬೆಳ್ಳಿ ಪದಕ, ಉದ್ಗಂ ಶಾಲೆಯ ಆರಾನ್ ಕಂಚಿನ ಪದಕ ಪಡೆದರು.
14 ವರ್ಷದೊಳಗಿನ ಬಾಲಕರ ವಿಭಾಗದ ನಿಶಾಂತ್ ಪಿ. ಗೌಡ, ಭಾರ್ಗವ್ ಮತ್ತು ಕೌಸ್ತುಭ್ ನಾರಾಯಣ ಮತ್ತು 17 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಅನಿಕೇತ್ ಚೌಧರಿ, ಶುಭಂ ಸಂತೋಷ್, ಆರಾನ್ ಮತ್ತು ಗೌರೀಶ ಬಿ.ಎಲ್ ಪ್ರಾದೇಶಿಕ ವಲಯದ ಪಂದ್ಯಾವಳಿ AKZ-12 ಗೆ ಆಯ್ಕೆ ಆಗಿದ್ದಾರೆ.
ಪಂದ್ಯಾವಳಿಯನ್ನು ಸಿ ಐ ಎಸ್ ಸಿ ಇ ವಲಯ ಮಟ್ಟದ ಮೈಸೂರು, ಕೊಡಗು ಮತ್ತು ಮಂಡ್ಯ ಜಿಲ್ಲೆ ಯ ಐ ಸಿ ಎಸ್ ಎ ಮತ್ತು ಐ ಎಸ್ ಸಿ ಶಾಲೆಯ ಆಟಗಾರರಿಗೆ ಆಯೋಜಿಸಲಾಗಿತ್ತು. ಶಾಲೆಯ
ಸಿಬ್ಬಂದಿಗಳಾದ ಓಂ ಪ್ರಕಾಶ್, ಕಾಮವ್ವ, ರೆಣ್ಯ, ಇಂದುಶ್ರೀ, ಫುನ್ಸುಕ್, ಯಶೋಧ, ಚೈನಿ ಕಾಳಪ್ಪ ಮತ್ತು ಶಾಲೆಯ ಟೆಬಲ್ ಟನಿಸ್ ಕೋಚ್ ರಾಜಶೇಖರ್ ಉಪಸ್ಥಿತರಿದ್ದರು. ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ರೀನಾ ಎಲ್ಲರನ್ನು ಪಂದ್ಯಾವಳಿಗೆ ಸ್ವಾಗತಿಸಿದಳು, ಅನುಷಾ ಕಾರ್ಯಕ್ರಮದ ನಿರೂಪಣೆ ಮಾಡಿದರು.
Back to top button
error: Content is protected !!