ಸಾಮಾಜಿಕ

ಬಸ್ ತಂಗುದಾಣಕ್ಕೆ ಹೊಸ ರೂಪ: ಧನ್ಯವಾದ ಸಲ್ಲಿಕೆ

ಕುಶಾಲನಗರ, ಅ 13: ಬೈಚನಹಳ್ಳಿಯ ಬಸ್ ತಂಗುದಾಣಕ್ಕೆ ಹೊಸ ರೂಪ ನೀಡಿರುವುದಕ್ಕೆ ಪ್ರವೀಣ್ ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆ ಅಭಿನಂದನೆ ವ್ಯಕ್ತಪಡಿಸಿದೆ.

ಪ್ರತಿಭಟನೆ‌ ನಡೆಸಿದ ಸಂದರ್ಭ

ಬಸ್ ತಂಗುದಾಣ ಅವ್ಯವಸ್ಥೆ ವಿರುದ್ದ ಕರವೇ ಪ್ರತಿಭಟನೆ ನಡೆಸಿ ಪುರಸಭೆ ಗಮನ ಸೆಳೆದಿತ್ತು. ಇದಕ್ಕೆ ಸ್ಪಂದಿಸಿ ಹಳೆಯ ಬೋರ್ಡ್ ಬದಲಾಯಿಸಿ ಹೊಸ ಬೋರ್ಡ್ ಅಳವಡಿಸಿ ಸುಣ್ಣಬಣ್ಣ ಬಳಿದು ಸ್ವಚ್ಛತಾ ಕಾರ್ಯ ನಡೆಸಿರುವುದು ನಮ್ಮ‌ಹೋರಾಟಕ್ಕೆ ಸಂದ ಜಯವಾಗಿದೆ. ಈ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳ ಕಾರ್ಯಕ್ಕೆ ಕರವೇ ನಗರಾಧ್ಯಕ್ಚ ಡಿ.ಆರ್.ಯೋಗೇಶ್ ಅಭಿನಂದನೆ ಸಲ್ಲಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!