ಪ್ರಕಟಣೆ

ಗಾಯಾಳು ವ್ಯಕ್ತಿಯ ಗುರುತು ಪತ್ತೆಗೆ ಮನವಿ

ಕುಶಾಲನಗರ, ಜು 17: ಜುಲೈ 13 ರಂದು ಬೆಳಗಿನ‌ ಜಾವ ಗುಡ್ಡೆಹೊಸೂರು ಬಳಿ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದವನಿಗೆ ಅಪರಿಚಿತ ಬೈಕ್ ಡಿಕ್ಕಿಪಡಿಸಿ ನಿಲ್ಲಿಸದೆ ಪರಾರಿಯಾಗಿದ್ದು ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ‌‌.

ಅಂದಾಜು 30-35 ವರ್ಷ ಪ್ರಾಯದ ಗಾಯಾಳು ಮಡಿಕೇರಿ
ಜಿಲ್ಲಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದು ಸ್ಪಷ್ಟವಾಗಿ ಮಾತನಾಡದ ಈತನ ಹೆಸರು ವಿಳಾಸ ತಿಳಿದುಬಂದಿಲ್ಲ. ಅಂದಾಜು 5 ಅಡಿ ಎತ್ತರದ ತೆಳ್ಳನೇ ಶರೀರದ ಈ ವ್ಯಕ್ತಿಯ ಬಗ್ಗೆ ಗುರುತು, ಮಾಹಿತಿ ಮತ್ತು ಡಿಕ್ಕಿಪಡಿಸಿದ ದ್ವಿಚಕ್ರ ವಾಹನದ ಮಾಹಿತಿ ಲಭ್ಯವಿದ್ದಲ್ಲಿ ಪೋಲೀಸ್ ಅಧೀಕ್ಷಕರು-08272-229000, ಕುಶಾಲನಗರ ಸಂಚಾರ ಪೊಲೀಸ್ ಠಾಣೆ-08276-278833, 8277958199 ಗೆ ಮಾಹಿತಿ ನೋಡಲು ಸಂಚಾರ ಪೊಲೀಸ್ ಠಾಣೆ ಪ್ರಕಟಣೆ ಕೋರಿದೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!