ಕುಶಾಲನಗರ, ಜು 15: ಕುಶಾಲನಗರದ ಸೋಮೇಶ್ವರ ದೇವಾಲಯ ಪಕ್ಕದ ಖಾಸಗಿ ಪ್ರಾಥಮಿಕ ಶಾಲಾ ಕಟ್ಟಡದಲ್ಲಿ ಅಪರಿಚಿತನ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮಧ್ಯರಾತ್ರಿ ಈ ವ್ಯಕ್ತಿ ಶಾಲಾ ಕಟ್ಟಡದ ಎರಡನೇ ಅಂತಸ್ಥಿಗೆ ತೆರಳಿರುವುದು ಸಿಸಿ ಕ್ಯಾಮೆರದಲ್ಲಿ ಸೆರೆಯಾಗಿದೆ. ಕಟ್ಟಡದ ಮೇಲ್ಭಾಗದಲ್ಲಿ ಹಾದು ಹೋಗಿದ್ದ ಕೇಬಲ್ ವೈರ್ ಅನ್ನು ಕುತ್ತಿಗೆಗೆ ಬಿಗಿದು ಕಟ್ಟಡದಿಂದ ಕೆಳಕ್ಕೆ ಹಾರಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕುಶಾಲನಗರ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.
Back to top button
error: Content is protected !!