ಆತ್ಮಹತ್ಯೆ

ಟೂಲ್ಸ್ ಕದ್ದ ಆರೋಪ: ಮನನೊಂದ ಮೆಕಾನಿಕ್ ಆತ್ಮಹತ್ಯೆ

ಕುಶಾಲನಗರ, ಸೆ 09: ತಾನು ಕೆಲಸ ಮಾಡುತ್ತಿದ್ದ ಜಾಗದಲ್ಲಿ ತನ್ನ ಮೇಲೆ ಬಂದ ಆರೋಪದಿಂದ ಮನನೊಂದ ಮೆಕಾನಿಕ್ ಯುವಕನೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೂಡ್ಲೂರಿನಲ್ಲಿ ನಡೆದಿದೆ.

ರಂಗಸಮುದ್ರ ಗ್ರಾಮದ ದಿ.ಗಂಗಾಧರ ಎಂಬವರ ಪುತ್ರ ದಿಲೀಪ (28) ಮೃತ ಯುವಕ. ಕೂಡ್ಲೂರಿನಲ್ಲಿ ರವಿ ಎಂಬವರ ವರ್ಕ್ ಶಾಪ್ ನಲ್ಲಿ ಕಳೆದ 10 ವರ್ಷಗಳಿಂದ ಮೆಕಾನಿಕ್ ಆಗಿ ಕೆಲಸ ಮಾಡುತ್ತಿದ್ದು ಕೆಲಸ ಮಾಡುವ ಪ್ರದೇಶದಲ್ಲಿ ವಾಸಿಸುತ್ತಿದ್ದ ಎನ್ನಲಾಗಿದೆ. ಮಂಗಳವಾರ ಈತ ತನ್ನ ತಾಯಿಗೆ ಕರೆ ಮಾಡಿ‌ ಮಾಲೀಕರ ಆರೋಪದಿಂದ ಮನನೊಂದಿರುವ ಬಗ್ಗೆ ತಿಳಿಸಿದ್ದಾರೆ. ಸಂಜೆ ತಾಯಿ ಕೂಡ್ಲೂರಿಗೆ ಬಂದು ನೋಡಿದಾಗ ದಿಲೀಪ ತನ್ನ ಕೋಣೆಯಲ್ಲಿ ನೇಣಿಗೆ ಶರಣಾಗಿರುವುದು ಕಂಡುಬಂದಿದೆ. ವರ್ಕ್ ಶಾಪ್ ನಲ್ಲಿ ನಡೆದ ಘಟನೆಯಿಂದ ತನ್ನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದು ಆತನ ಸಾವಿನ ಬಗ್ಗೆ ಸಂಶಯವಿರುವುದಾಗಿ ಸೂಕ್ತ ಕ್ರಮಕ್ಕೆ ಕೋರಿ ತಾಯಿ ಮೀರಾ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!