ಕಾರ್ಯಕ್ರಮ

ಕೂಡಿಗೆಯಲ್ಲಿ ಪೋಲಿಸ್ ಇಲಾಖೆಯ ವತಿಯಿಂದ ಅಂತರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನ ಆಚರಣೆ

ಕೂಡಿಗೆ, ಜೂ.25: ಕುಶಾಲನಗರ ಗ್ರಾಮಾಂತರ ಪೋಲಿಸ್ ಠಾಣೆಯ ವತಿಯಿಂದ ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ಕೂಡಿಗೆ ಮತ್ತು ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಾರ್ವಜನಿಕರು, ಮತ್ತು ಆಟೋ ಚಾಲಕರು ಸೇರಿದಂತೆ ಗ್ರಾಮಸ್ಥರ ಸಹಕಾರದೊಂದಿಗೆ ಮಾದಕ ದ್ರವ್ಯ ವಿರೋಧಿ ದಿನಾಚರಣೆಯನ್ನು ಆಚರಿಸಲಾಯಿತು.
ದಿನಾಚರಣೆಯಲ್ಲಿ ಕುಶಾಲನಗರ ಗ್ರಾಮಾಂತರ ಪೋಲಿಸ್ ಠಾಣಾಧಿಕಾರಿ ರಾಮಚಂದ್ರ ಅವರು ಚಾಲನೆ ನೀಡಿ ಮಾತಾನಾಡುತ್ತಾ ದ್ರವ್ಯ ಸೇವನೆಯ ದುಷ್ಪರಿಣಾಮದಿಂದಾಗುವ ಅನಾಹುತಗಳು ತಮ್ಮ ಬದುಕನ್ನು ಹಾಳುಮಾಡುವುದರ ಜೊತೆಯಲ್ಲಿ ಜೀವನದ ಹುಸಿರನ್ನೇ ತೆಗೆಯುತ್ತದೆ. ಯುವಕರು ಸೇವನೆಯ ದುಷ್ಟಟಗಳಿಂದ ದೂರವಿರಬೇಕಾಗಿದೆ,ಅಲ್ಲದೆ ಅಂತಹ ಪ್ರಸಂಗದ ಸುದ್ದಿ ತಿಳಿದ ತಕ್ಷಣವೇ ಪೋಲಿಸ್ ಸಹಾಯವಾಣೆ,ಅಥವಾ ಠಾಣೆಯ ವ್ಯಾಪ್ತಿಯ ಗ್ರಾಮಾಂತರ ಗುಸ್ತು ಪೋಲಿಸ್ ಸಿಬ್ಬಂದಿಗೆ ಮಾಹಿತಿಯನ್ನು ನೀಡಬೇಕು ಎಂಬುದರ ಬಗ್ಗೆ ಕೂಡಿಗೆ ಸರ್ಕಲ್ ನಲ್ಲಿ ಸಾರ್ವಜನಿಕವಾಗಿ ಸವಿಸ್ತಾರವಾದ ಮಾಹಿತಿಯನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಠಾಣೆಯ ಅಪರಾಧ ವಿಭಾಗದ ಠಾಣಾಧಿಕಾರಿ ಸ್ವಾಮಿ ,ಸೇರಿದಂತೆ ಸಿಬ್ಬಂದಿ ವರ್ಗ, ಕೂಡಿಗೆ, ಕೂಡುಮಂಗಳೂರು ಸರ್ಕಲ್ ನ ಆಟೋ ಮಾಲೀಕರು, ಮತ್ತು ಚಾಲಕರು, ನೂರಾರು ಸಾರ್ವಜನಿಕರು, ಇದ್ದರು.
ನಂತರ ಪೋಲಿಸ್ ಸಿಬ್ಬಂದಿಗಳು ಸೇರಿದಂತೆ ಎರಡೂ ಕಡೆಯ ಹಲವು ಆಟೋ ಚಾಲಕರು, ಮಾಲೀಕರು ಸೇರಿದಂತೆ ಸಾರ್ವಜನಿಕರು ತಮ್ಮ ತಮ್ಮ ವಾಹನಗಳ ಮೂಲಕ ಕೂಡಿಗೆ ಸರ್ಕಲ್ ನಿಂದ ಹಾಸನ ಹೆದ್ದಾರಿ ಮೂಲಕ ಕೈಗಾರಿಕಾ ವೃತ್ತದ ವರೆಗೆ ಸಾಗಿ ಸಾರ್ವಜನಿಕವಾಗಿ ಅರಿವು ಮೂಡಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!