ಕಾರ್ಯಕ್ರಮ

ಕುಶಾಲನಗರದ ಕೆಬಿ ಕಾಲೇಜಿನಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಅಭಿಯಾನ

ಕುಶಾಲನಗರ, ‌ಮೇ 27: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಸೋಮವಾರಪೇಟೆ ತಾಲೂಕು ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕೊಡಗು ಜಿಲ್ಲೆ ವತಿಯಿಂದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಅಭಿಯಾನವನ್ನು ಕನ್ನಡ ಭಾರತಿ ಪದವಿ ಪೂರ್ವ ಕಾಲೇಜು ಇಲ್ಲಿ ಪ್ರಾರಂಭಿಸಲಾಯಿತು. ಕಾರ್ಯಕ್ರಮ ಉದ್ಘಾಟನೆಯನ್ನು ಗೌರವಾನ್ವಿತ ಜಿಲ್ಲಾ ನಿರ್ದೇಶಕರಾದ ವಿಠಲ್ ಎಸ್ ಸಾಲ್ಯಾನ್ ರವರು ಸಸಿಗೆ ನೀರು ಚಿಮುಕಿಸುವ ಮೂಲಕ ಉದ್ಘಾಟನೆ ಮಾಡಿ ವಿಶ್ವ ತಂಬಾಕು ವಿರೋಧಿ ದಿನಾಚರಣೆಯನ್ನು ಪ್ರತಿವರ್ಷ ಮೇ 31ರಂದು ಆಚರಿಸಲಾಗುತ್ತದೆ. ಈ ದಿನವನ್ನು World Health Organization (WHO) 1987ರಲ್ಲಿ ಪ್ರಾರಂಭಿಸಿತು. ತಂಬಾಕು ಬಳಕೆಯಿಂದ ಉಂಟಾಗುವ ಆರೋಗ್ಯ ಹಾನಿ, ಆರ್ಥಿಕ ನಷ್ಟ ಮತ್ತು ಸಾಮಾಜಿಕ ಪರಿಣಾಮಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಚಂದ್ರಮೋಹನ್ ರವರು ತಂಬಾಕು ಸೇವನೆಯಿಂದ ಕ್ಯಾನ್ಸರ್, ಹೃದಯ ರೋಗ, ಉಸಿರಾಟದ ಸಮಸ್ಯೆಗಳು ಹಾಗೂ ಅನೇಕ ಗಂಭೀರ ಕಾಯಿಲೆಗಳು ಉಂಟಾಗುತ್ತವೆ. ಸಿಗರೇಟ್, ಬೀಡಿ, ಗುಟ್ಕಾ, ಪಾನ್ ಮಸಾಲಾ ಮುಂತಾದ ತಂಬಾಕು ಉತ್ಪನ್ನಗಳು ವ್ಯಕ್ತಿಯ ಆರೋಗ್ಯಕ್ಕೆ ಮಾತ್ರವಲ್ಲ, ಕುಟುಂಬ ಮತ್ತು ಸಮಾಜಕ್ಕೂ ಹಾನಿಕಾರಕವಾಗಿವೆ, ನಮ್ಮ ದೇಹದ ಆರೋಗ್ಯ ಜೊತೆಗೆ ಪರಿಸರ ಆರೋಗ್ಯ ಕಾಪಾಡಿಕೊಳ್ಳಿ ಎಂದು ಮಾಹಿತಿ ನೀಡಿದರು. ವೇದಿಕೆಯಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ರಾಜಶೇಖರ್, ಎಚ್ ಎಂ ರವರು ಮುಖ್ಯ ಅಥಿತಿಗಳಾಗಿ ಮಾತನಾಡುತ್ತಾ. ಮನುಷ್ಯರೇ ಮನುಷ್ಯರ ಜೀವಕ್ಕೆ ಹಾನಿ ಮಾಡಿಕೊಳ್ಳುತ್ತಿದ್ದಾರೆ. ದುರಾಬ್ಯಾಸ ಕಳಿಸಿದವನಿಗಿಂತ ದುರಾಬ್ಯಾಸ ಕಳಿತವ ಬೇಗನೆ ನಾಶವಾಗುತ್ತಾನೆ. ಇವತ್ತು ವಿದ್ಯಾರ್ಥಿ ಸಮೂಹ ಇಂತಹ ಮಾರಕಕ್ಕೆ ಬಲಿ ಬೀಳುತ್ತಿರುವುದು ಅಂತ್ಯದ ದು:ಖದ ವಿಚಾರ ಎಂದರು ವೇದಿಕೆಯ ಇನ್ನೋರ್ವ ಸದಸ್ಯರಾದ ಚಂದ್ರು, ರವರು ಮಾತನಾಡುತ್ತಾ ವಿದ್ಯಾರ್ಥಿಗಳು ದುಶ್ಚಟಗಳಿಗೆ ಬಹುಬೇಗನೆ ಬಲಿಯಾಗುತ್ತಿದ್ದಾರೆ. ಗಾಂಜಾ ಮುಂತಾದ ಮಾರಕವಾದ ವಸ್ತುಗಳ ತಿನ್ನುವುದರ ಮೂಲಕ ಇವತ್ತು ಸಾಯುತ್ತಿರುವುದು ಬೇಸರದ ಸಂಗತಿ. ಇತ್ತೀಚೆಗಿನ ದಿನಗಳಲ್ಲಿ ಸಣ್ಣ ಪ್ರಾಯದ ಮಕ್ಕಳು ಬಲಿಯಾಗುತ್ತಿದ್ದಾರೆ ವಾಹನ ಅಪಘಾತವಾಗುತ್ತಿರುವುದು ಮತ್ತು ಎಳೆಯ ವಯಸ್ಸಿನ ಮಕ್ಕಳು ಸಾಯುತ್ತಿರುವುದನ್ನು ಕಂಡರೆ ನಮಗೆ ಇದಕ್ಕೆ ಏನಾದರೂ ಒಂದು ಪರಿಹಾರ ಕಂಡುಕೊಳ್ಳಬೇಕೆಂಬ ಮನಸ್ಸಾಗುತ್ತದೆ. ಇವತ್ತು ಜನಜಾಗೃತಿ ವೇದಿಕೆಯು ಇದನ್ನು ಮಾಡುತ್ತಿದೆ.ನಾವೆಲ್ಲರೂ ವೇದಿಕೆಯಲ್ಲಿ ಈ ಬಗ್ಗೆ ಸದಾ ಬೆಂಬಲ ಒಗ್ಗಟ್ಟಾಗಿ ನೀಡುತ್ತೇವೆ.ಎಂದು ತಿಳಿಸಿದರು. ಯೋಜನಾಧಿಕಾರಿ ಹನುಮಂತಪ್ಪ ಅಂಗಡಿ, ಒಕ್ಕೂಟ ಅಧ್ಯಕ್ಷರು ಜರೀನಾ, ಪ್ರಾಂಶುಪಾಲರು ನಾಗೇಂದ್ರಸ್ವಾಮಿ , ,ಸೇವಾಪ್ರತಿನಿಧಿ ಶಾಲಿನಿ, ಕನ್ನಡ ಉಪನ್ಯಾಸಕಿ ಶ್ರೀ ಮತಿ ಸೌಮ್ಯ, ಸ್ವಾಗತಿಸಿ ಮೇಲ್ವಿಚಾರಕರು ಕುಶಾಲನಗರ ವಲಯ ಮೇಲ್ವಿಚಾರಕರು ಸುಧೀರ್ ನೆಕ್ರಾಜೆ ನಿರೂಪಣೆ ಮಾಡಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!