ಕ್ರೀಡೆ

ಪುರುಷರ ರಾಷ್ಟ್ರೀಯ ಹಾಕಿ ಟೂರ್ನಿಗೆ ಕೊಡಗು ಜಿಲ್ಲಾ ಸರ್ಕಾರಿ ನೌಕರರ ತಂಡ ಆಯ್ಕೆ: ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಹಾಕಿ ಟೂರ್ನಿ

ಕುಶಾಲನಗರ, ಮೇ.27: ಕೊಡಗು ಜಿಲ್ಲಾ ಸರ್ಕಾರಿ ನೌಕರರ ಪುರುಷರ ಹಾಕಿ ತಂಡವು ರಾಜ್ಯ ಮಟ್ಟದ ಹಾಕಿ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ.
‌‌‌ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘದ ಜಂಟಿ ಆಶ್ರಯದಲ್ಲಿ ಬೆಂಗಳೂರು
ನಗರದ ಫೀಲ್ಡ್ ಮಾರ್ಷಲ್ ಕೆ. ಎಂ.ಕಾರ್ಯಪ್ಪ ಹಾಕಿ
ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟದ
ಹಾಕಿ ಟೂರ್ನಿಯಲ್ಲಿ ಕೊಡಗು ಜಿಲ್ಲಾ ಸರ್ಕಾರಿ ನೌಕರರ ಸಂಘದ ಪುರುಷರ ಹಾಕಿ ತಂಡವು ತಂಡದ ನಾಯಕ ಬಿ.ಟಿ.ಪೂರ್ಣೇಶ್ ನೇತೃತ್ವದಲ್ಲಿ
7-1 ಗೋಲುಗಳಿಂದ ಮೈಸೂರು ಜಿಲ್ಲಾ ತಂಡವನ್ನು ಮಣಿಸಿ ರಾಷ್ಟ್ರೀಯ ಟೂರ್ನಿಗೆ ಅರ್ಹತೆ ಪಡೆಯಿತು.
ಕೊಡಗು ಜಿಲ್ಲಾ ತಂಡದ ಆಟಗಾರರಾದ
ಜಾಗೃತ್ -2 , ಬಿ.ಟಿ.ಪೂರ್ಣೇಶ್, ಡಿ.ಸಿ.ಸಂಜಿತ್, ಹರ್ಷಲ್, ಚಂದ್ರಶೇಖರ್ ಹಾಗೂ ಪಿ.ಎಸ್.
ಸತೀಶ್ ತಲಾ ಒಂದು ಗೋಲು ಪಡೆದು ಗೆಲುವಿನ ನಗೆ ಬೀರಿದರು.
ಟೂರ್ನಿಯಲ್ಲಿ ಡ್ಯಾನಿ ಈರಪ್ಪ, ಮೌನ್ ಮೊಣ್ಣಪ್ಪ, ಜಿ.ಕೆ.ಮಂಜುನಾಥ್, ಪೂಣಚ್ಚ, ಸುಬ್ಬಯ್ಯ, ಮಾಚಯ್ಯ, ರತೀಶ್, ಶ್ರೀನಿವಾಸ ರೈ, ದಯಾನಂದ ಪ್ರಕಾಶ್, ವಿ.ಎನ್. ಉತ್ತಪ್ಪ,
ಸೋಮಣ್ಣ , ರಘು ಆಟಗಾರರಾಗಿ ಭಾಗವಹಿಸಿ ಉತ್ತಮ ಆಟ ಪ್ರದರ್ಶಿಸಿದರು.
ರಾಜ್ಯಮಟ್ಟದ ಹಾಕಿ ಟೂರ್ನಿಯಲ್ಲಿ ಕೊಡಗು ಜಿಲ್ಲಾ ಸರ್ಕಾರಿ ನೌಕರರ ಸಂಘದ ತಂಡವು ಸತತವಾಗಿ 22 ನೇ ಬಾರಿ ಗೆಲವು ಸಾಧಿಸಿ ರಾಷ್ಟ್ರೀಯ ಹಾಕಿ ಟೂರ್ನಿಗೆ ಆಯ್ಕೆಯಾಗಿರುವುದು ಹೆಗ್ಗಳಿಕೆ ತಂದಿದೆ.
ರಾಷ್ಟ್ರೀಯ ಹಾಕಿ ಟೂರ್ನಿಗೆ ಕೊಡಗು ಜಿಲ್ಲಾ ಸರ್ಕಾರಿ ನೌಕರರ ತಂಡವು ಸತತವಾಗಿ ಆಯ್ಕೆಯಾ
ಗುತ್ತಿರುವುದು ಹಾಕಿ ಕ್ರೀಡೆಯ ತವರೆನಿಸಿದ ಕೊಡಗು ಜಿಲ್ಲೆಯ ಕ್ರೀಡಾಭಿಮಾನಿಗಳಿಗೆ ತುಂಬಾ ಸಂತಸ ತಂದಿದೆ ಎಂದು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಸಿ.ಅರುಣ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.
ಮುಂದಿನ ಅಕ್ಟೋಬರ್ ನಂತರ ನಡೆಯಲಿರುವ ರಾಷ್ಟ್ರೀಯ ಪುರುಷರ ಹಾಕಿ ಟೂರ್ನಿಯಲ್ಲಿ ಕೊಡಗು ಜಿಲ್ಲಾ ಪುರುಷರ ತಂಡವು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದೆ ಎಂದು ಹಾಕಿ ಟೂರ್ನಿಯ ತಂಡದ ನಾಯಕ ಬಿ.ಟಿ.ಪೂರ್ಣೇಶ್ ತಿಳಿಸಿದ್ದಾರೆ.
*************************************

Related Articles

Leave a Reply

Your email address will not be published. Required fields are marked *

Back to top button
error: Content is protected !!