ಕಾರ್ಯಕ್ರಮ

ಕುಶಾಲನಗರ ರೋಟರಿಗೆ ರಾಜ್ಯಪಾಲರ ಭೇಟಿ

ಕುಶಾಲನಗರ, ಮೇ 07:ಕುಶಾಲನಗರ ರೋಟರಿ ಸಂಸ್ಥೆಯು ಇತ್ತೀಚಿನ ವರ್ಷಗಳಲ್ಲಿ ಸಮಾಜ ಸೇವ ಕಾರ್ಯಕ್ರಮಗಳ ನಿರ್ವಹಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ತಮ್ಮ ಸುತ್ತಮುತ್ತಲ ವಾತಾವರಣವನ್ನು ಹಸನುಗೊಳಿಸುವ ಸ್ವಚ್ಛ ಸಮಾಜ ನಿರ್ಮಾಣಕ್ಕೆ ಮಹತ್ವದ ಸ್ಥಾನವನ್ನು ನೀಡಿದೆ ಎಂದು ಜಿಲ್ಲಾ ರಾಜ್ಯಪಾಲ ಪಿ.ಕೆ. ರಾಮಕೃಷ್ಣ ಅವರು ಹೇಳಿದರು.
ಕುಶಾಲನಗರದ ರೋಟರಿ ಸಭಾಂಗಣದಲ್ಲಿ ಬುಧವಾರ ಸಂಜೆ ನಡೆದ “ಜಿಲ್ಲಾ ರಾಜ್ಯಪಾಲ ಬೇಟಿ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರಪಂಚದ ದೇಶಗಳ ಮಟ್ಟದಲ್ಲಿ ನಮ್ಮ ದೇಶವನ್ನು ನೋಡಿದಾಗ ವಾತಾವರಣದಲ್ಲಿ ನಾವು ಉತ್ತಮ ಸ್ಥಾನ ಹೊಂದಿದ್ದೇವೆ. ಕುಶಾಲನಗರದ ರೋಟರಿ ಕ್ಲಬ್ “ಕ್ಲೀನ್ ಸಿಟಿ”ಘೋಷವಾಕ್ಯದ ಮೂಲಕ ನಗರದ ಪ್ರವೇಶ ಭಾಗದಿಂದ ಪುರಸಭೆಯ ವ್ಯಾಪ್ತಿ ಪೂರ್ಣ ಮತ್ತು ಪ್ರವಾಸಿ ತಾಣಗಳಾದ ದುಬಾರೆ, ಚಿಕ್ಲಿಹೊಳೆ, ಕಾವೇರಿ ನಿಸರ್ಗಧಾಮ, ಹಾರಂಗಿ ಜಲಾಶಯ ವ್ಯಾಪ್ತಿಯಲ್ಲಿ ದೇಶಾದ್ಯಂತ ಇಲ್ಲಿಗೆ ಬರುವ ಪ್ರವಾಸಿಗರು ಉತ್ತಮವಾದ ವಾತಾವರಣವನ್ನು ನೋಡುವಂತೆ ಕಸ ನಿರ್ವಹಣೆಗಾಗಿ ಉತ್ತಮ ವ್ಯವಸ್ಥೆ ಮಾಡಿದ್ದಾರೆ. ಇದು ಮಾತ್ರವಲ್ಲ ಕಸ ನಿರ್ವಹಣೆಗಾಗಿ ಉತ್ತಮ ಯೋಜನೆಯನ್ನು ರೋಟರಿ ಸುವರ್ಣ ಸಂಭ್ರಮ ಸಂದರ್ಭದಲ್ಲಿ ಪುರಸಭೆ ಸಹಯೋಗದಲ್ಲಿ ಯಶಸ್ವಿ ಕಾರ್ಯಕ್ರಮವನ್ನು ಮಾಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಮುಂದುವರೆದು ಮಾತನಾಡಿದ ಅವರು ರೋಟರಿ ಸಂಸ್ಥೆ ದೇಶಾದ್ಯಂತ ಉತ್ತಮ ಕಾರ್ಯಗಳನ್ನು ಮಾಡುತ್ತಿದೆ ದೇಶದ ಸಮಗ್ರತೆ ಮತ್ತು ಕಾನೂನು ವ್ಯವಸ್ಥೆ ವಿಷಯಗಳಲ್ಲಿ ತಮ್ಮ ಸಂಸ್ಥೆಯ ಸಿಎಸ್ಆರ್ ಫಂಡ್ ಮೂಲಕ ಕೋಟ್ಯಂತರ ರೂಪಾಯಿಗಳನ್ನು ವೆಚ್ಚ ಮಾಡಿ ದೇಶ ಸೇವೆಯಲ್ಲಿ ನಾವೂ ಇದ್ದೇವೆ ಎಂಬುದಕ್ಕೆ ಉದಾಹರಣೆಯಾಗಿ ತಮಿಳುನಾಡಿನ ಕೊಯಮತ್ತೂರು ನಗರದಲ್ಲಿ ಸಿಸಿಟಿವಿ ಕ್ಯಾಮರಾಗಳ ಅಳವಡಿಕೆ, ಮಹಾರಾಷ್ಟ್ರದ ಪುನಾದಲ್ಲಿ ಸೇವಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮಾಡಿದೆ. 26 ಡಾಲರ್ ಗಳಿಂದ ಪ್ರಾರಂಭವಾದ ಸಿ ಎಸ್ ಆರ್ ಫಂಡ್ ಯೋಜನೆ ಇಂದು ಸುಮಾರು 9 ಬಿಲಿಯನ್ ಡಾಲರ್ ಕ್ರೋಡಿಕರಣಕ್ಕೆ ಸಾಕ್ಷಿಯಾಗಿದೆ ಎಂದರು.
ವೇದಿಕೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಅಧ್ಯಕ್ಷರಾದ ಮನು ಪೆಮ್ಮಯ್ಯ ಮಾತನಾಡಿ, ಸಂಸ್ಥೆಯ ಸದಸ್ಯರು, ಕುಶಾಲನಗರ ಪುರಸಭೆ, ಕ್ಷೇತ್ರದ ಶಾಸಕರು ಮತ್ತು ಎಸ್ಎಲ್ಎನ್ ಸಂಸ್ಥೆ ಸೇರಿದಂತೆ ಹಲವು ಸಂಘ ಸಂಸ್ಥೆಗಳು ನಮ್ಮ ಐವತ್ತು ವರ್ಷಗಳ ಸುವರ್ಣ ಸಂಭ್ರಮದ ಯೋಜನೆ ಯಶಸ್ಸಿಗೆ ನಮ್ಮೊಂದಿಗೆ ಕೈಜೋಡಿಸಿದ್ದಾರೆ ಎಲ್ಲರಿಗೂ ಕೃತಜ್ಞತೆಗಳು. ಮುಂದಿನ ದಿನಗಳಲ್ಲಿ ಇನ್ನೂ ಉತ್ತಮವಾದ ಸೇವಾ ಕಾರ್ಯಕ್ರಮಗಳನ್ನು ರೋಟರಿ ಸಂಸ್ಥೆ ಕೈಗೊಳ್ಳಲಿದೆ. ನಗರದ ಪ್ರತಿ ಮನೆ ಮನೆಯಲ್ಲೂ ರೋಟರಿ ಸಂಸ್ಥೆ ರೂಪಿಸಿದ ಸ್ವಚ್ಛ ಕುಶಾಲನಗರ ಘೋಷವಾಕ್ಯವು ಪ್ರತಿಧ್ವನಿಸುವಂತೆ, ಅವರಲ್ಲಿ ಜಾಗೃತಿಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ. ಅಂತೆಯೇ ಕಾವೇರಿ ನದಿಗೆ ನಿರ್ಮಿಸಲಾಗಿರುವ ಹೊಸ ಸೇತುವೆ ಮೇಲ್ಭಾಗದಿಂದ ನದಿಗೆ ಎಸೆಯುವ ಕಸ ಮತ್ತಿತರ ವಸ್ತುಗಳನ್ನು ಎಸೆಯದಂತೆ ನಿಯಂತ್ರಿಸುವ, ಹಾಗೂ ಸೇತುವೆಯ ಮೇಲ್ಭಾಗದಿಂದ ನದಿಗೆ ಧುಮುಕಿ ಆತ್ಮಹತ್ಯೆ ಮಾಡಿಕೊಳ್ಳುವ ಸನ್ನಿವೇಶವನ್ನು ನಿಯಂತ್ರಿಸಲು, ಎತ್ತರದ ಗ್ರಿಲ್ ನಿರ್ಮಾಣ ಮಾಡಿ ರೋಟರಿ ಸಂಸ್ಥೆ ಉತ್ತಮ ಕೆಲಸ ಮಾಡಿದೆ ಎಂದರು.
ಈ ಸಂದರ್ಭದಲ್ಲಿ ವಿವೇಕಾನಂದ ಯೂಥ್ ಮುಮೆಂಟ್ ನ ನಿರ್ವಾಹಕರಾದ ಸುನಿತಾ ಅವರ ಕಾರ್ಯದಕ್ಷತೆಯನ್ನು ಸೇವಾ ಯೋಜನಾ ಕಾರ್ಯಕ್ರಮವನ್ನು ಗುರುತಿಸಿ ರೋಟರಿ ಸಂಸ್ಥೆ ಸನ್ಮಾನ ಮಾಡಿದ್ದು ವಿಶೇಷವಾಗಿತ್ತು. ಅದೇ ರೀತಿ ರೋಟರಿ ಸಂಸ್ಥೆಯ ಸದಸ್ಯರಾಗಿರುವ ಸಂತೋಷ್ ಲಕ್ಷ್ಮಣ್ ಅವರು ಸುಮಾರು 53 ಬಾರಿ ರಕ್ತದಾನ ಮಾಡುವ ಮೂಲಕ ಸಮಾಜ ಸೇವಾ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಬಗ್ಗೆ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ನೂತನ ಸದಸ್ಯರಾಗಿ ಡಾ. ಶಿರ್ಷಾನಂದ ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಉಪ ರಾಜ್ಯಪಾಲ ಉಲ್ಲಾಸ್ ಕೃಷ್ಣ, ರುದ್ರೇಶ್ ಪಟೇಲ್, ಎಚ್ ಪಿ ಮಂಜುನಾಥ್, ಎಸ್ ಕೆ ಸತೀಶ್, ಎಂ ಡಿ ರಂಗಸ್ವಾಮಿ, ಮಹೇಶ್ ನಲ್ವಡಿ, ಡಾ. ಹರೀ ಶೆಟ್ಟಿ, ಡಾ. ಧರಣೇಂದ್ರ, ಎ. ಎ. ಚೆಂಗಪ್ಪ, ರಾಣಿ ಉಲ್ಲಾಸ್,ಆರತಿಶೆಟ್ಟಿ ಜಿಲ್ಲೆ ಮತ್ತು ಹೊರ ಜಿಲ್ಲೆಗಳ ರೋಟರಿ ಪ್ರತಿನಿಧಿಗಳು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!