ಕುಶಾಲನಗರ, ಮೇ 07: ಮಾರ್ಚ್ ನಲ್ಲಿ ಬಾಳೆಗುಂಡಿ ಬಳಿ ಕಾಡಾನೆ ದಾಳಿಯಿಂದ ಮೃತಪಟ್ಟ ಮಾಜಿ ಜನಪ್ರತಿನಿಧಿ ಜಲಜಾಕ್ಷಿ ಕುಟುಂಬಕ್ಕೆ ಎರಡನೇ ಹಂತದ ಪರಿಹಾರ ಧನ ವಿತರಿಸಲಾಯಿತು.
ದುಬಾರೆಗೆ ಆಗಮಿಸಿದ್ದ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ನಿರ್ದೇಶನದಂತೆ ಶಾಸಕ ಡಾ.ಮಂತರ್ ಗೌಡ ಅವರು ಎರಡನೇ ಹಂತದ ಪರಿಹಾರ ಮೊತ್ತ 15 ಲಕ್ಷ ರೂ ಚೆಕ್ ಅನ್ನು ಮೃತರ ಪತಿ ಸ್ವಾಮಿ ಅವರಿಗೆ ಹಸ್ತಾಂತರಿಸಿದರು.
ಅಲ್ಲದೆ ಪ್ರತಿ ತಿಂಗಳು ಮಾಶಾಸನ ನೀಡಲು ಕ್ರಮ ವಹಿಸುವಂತೆ ಶಾಸಕರು ಅರಣ್ಯಾಧಿಕಾರಿ ಗೆ ಸೂಚಿಸಿದ್ದಾರೆ.
ಈ ಸಂದರ್ಭ ಕುಶಾಲನಗರ ತಾಲ್ಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಕೆಡಿಪಿ ಸದಸ್ಯೆ ಸುನಿತಾ ಮಂಜುನಾಥ್, ಎಸಿಎಫ್ ಗೋಪಾಲ್ ಇದ್ದರು.
Back to top button
error: Content is protected !!