ಕುಶಾಲನಗರ, ಜು 02: ಬೀದಿನಾಯಿಗಳ ದಾಳಿಗೆ ಎರಡು ಕುರಿಗಳು ಮೃತಪಟ್ಟ ಘಟನೆ ನಡೆದಿದೆ.
ಕುಶಾಲನಗರದ ಇಂದಿರಾ ಬಡಾವಣೆಯ ಖಲೀಲ್ ಎಂಬವರಿಗೆ ಸೇರಿದ ಎರಡು ಕುರಿಗಳ ಮೇಲೆ 10 ಕ್ಕೂ ಅಧಿಕ ಬೀದಿ ನಾಯಿಗಳು ದಾಳಿ ನಡೆಸಿ ಕೊಂದು ಹಾಕಿವೆ. 20 ಸಾವಿರ ಬೆಲೆಬಾಳುವ ಕುರಿಗಳ ಸಾವಿಗೆ ಮಾಲೀಕರು ಮರುಕ ವ್ಯಕ್ತಪಡಿಸಿದ್ದಾರೆ. ನಾಯಿಗಳ ಹಾವಳಿಯಿಂದ ಮಕ್ಕಳು ಹೊರಗೆ ಅಡ್ಡಾಡಲು ಆತಂಕದ ವಾತಾವರಣ ಸೃಷ್ಠಿಯಾಗಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.
Back to top button
error: Content is protected !!