ಕ್ರೀಡೆ

ಸೆಸ್ಟೋಬಾಲ್ ಸಬ್ ಜೂನಿಯರ್ ನ್ಯಾಷನಲ್ ಚಾಂಪಿಯನ್ ಶಿಪ್: ಕರ್ನಾಟಕದ ಬಾಲಕ-ಬಾಲಕಿಯರ ತಂಡ ಚಾಂಪಿಯನ್

ಕುಶಾಲನಗರ, ಮೇ 07: ಹೈದರಾಬಾದ್ ನಲ್ಲಿ ನಡೆದ ಸೆಸ್ಟೋಬಾಲ್ 4ನೇ ಸಬ್ ಜೂನಿಯರ್ ನ್ಯಾಷನಲ್ ಚಾಂಪಿಯನ್‌ಶಿಪ್ ನಲ್ಲಿ ಕರ್ನಾಟಕದ ಬಾಲಕ ಮತ್ತು ಬಾಲಕಿಯರ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿ ಚಿನ್ನದ‌ ಪದಕ ಗಳಿಸಿದ್ದಾರೆ.

ಈ ಕ್ರೀಡೆಯಲ್ಲಿ ಒಟ್ಟು 20 ರಾಜ್ಯಗಳ ತಂಡಗಳು ಭಾಗವಹಿಸಿದ್ದವು.‌ ಬಹುತೇಕ ಕೊಡಗಿನ ಕ್ರೀಡಾಪಟುಗಳನ್ನು ಒಳಗೊಂಡಿದ್ದ
ಕರ್ನಾಟಕ ತಂಡವು ಗೋವಾ, ಜಮ್ಮು ಕಾಶ್ಮೀರ, ಅಸ್ಸಾಂ , ಚಂಡೀಗರ್ ತಂಡಗಳನ್ನು ಮಣಿಸಿ ಕ್ವಾರ್ಟರ್ ಫೈನಲ್ ನಲ್ಲಿ ವಿದರ್ಭ ತಂಡವನ್ನು 21-18 ರಲ್ಲಿ ಮಣಿಸಿತು. ಸೆಮಿ ಫೈನಲ್ ನಲ್ಲಿ ಗೋವಾ ತಂಡದ ವಿರುದ್ಧ 18-40ರ ಭಾರಿ ಅಂತರದಲ್ಲಿ ಗೆದ್ದು ನಂತರ ಫೈನಲ್ ಪಂದ್ಯಾಟದಲ್ಲಿ ಪಂಜಾಬ್ ವಿರುದ್ಧ 58-30 ರ ಅಂತರದಲ್ಲಿ ಜಯಗಳಿಸುವುದರ ಮೂಲಕ ಕರ್ನಾಟಕದ ಬಾಲಕರ ತಂಡ ನಾಲ್ಕನೇ ಸಬ್ ಜೂನಿಯರ್ ಪಂದ್ಯಾಟದ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಬಾಲಕಿಯರ ತಂಡ ಕೇರಳದ ವಿರುದ್ಧ ಮೊದಲು ಎಡವಿದರು. ನಂತರ ತೆಲಂಗಾಣ ತಂಡದ ಮೇಲೆ ಸಮಬಲವನ್ನು ಸಾಧಿಸಿ ಅಸ್ಸಾಂ, ಚಂಡೀಗರ್ ತಂಡಗಳ ಮೇಲೆ ಅತಿ ಹೆಚ್ಚು ಅಂಕಗಳನ್ನು ಪಡೆಯುವುದರ ಮೂಲಕ ನೇರವಾಗಿ ಸೆಮಿ ಫೈನಲ್ ಪಂದ್ಯಾಟಕ್ಕೆ ಆಯ್ಕೆಯಾಗಿ ನಂತರ ಸಮಿಫೈನಲ್ ನಲ್ಲಿ ಬಲಿಷ್ಠ ತಮಿಳುನಾಡು ತಂಡವನ್ನು ಮಣಿಸಿ ಅಂತಿಮ ಪಂದ್ಯಾಟದಲ್ಲಿ ಆಂಧ್ರಪ್ರದೇಶವನ್ನು ಸೋಲಿಸುವುದರ ಮೂಲಕ ನಾಲ್ಕನೇ ಸಬ್ ಜೂನಿಯರ್ ನ್ಯಾಷನಲ್ ನ ಚಾಂಪಿಯನ್ ಗಳಾಗಿ ಹೊರಹೊಮ್ಮಿದರು.

ಕರ್ನಾಟಕ ತಂಡದ ತರಬೇತುದಾರರಾಗಿ ಕುಶಾಲನಗರದ ಜಾನ್ಸನ್ ಕಾರ್ಯನಿರ್ವಹಿಸಿದರು.
ಕರ್ನಾಟಕದ ಬಾಲಕರ ತಂಡದ ನಾಯಕನಾಗಿ ಕುಶಾಲನಗರದ ಕನ್ನಡ ಭಾರತಿ ಪದವಿ ಪೂರ್ವ ಕಾಲೇಜಿನ ದಿನೇಶ್ ತಂಡವನ್ನು ಮುನ್ನಡೆಸಿದರು.

ಬಾಲಕಿಯರ ತಂಡದ ನಾಯಕಿಯಾಗಿ ವಿರಾಜಪೇಟೆಯ ಸಂತ ಅನ್ನಮ ಶಾಲೆಯ ಸಂಜನಾ ತಂಡವನ್ನು ಮುನ್ನಡೆಸಿದರು.

ಬಾಲಕರ ತಂಡದಲ್ಲಿ ಚಿರಂತ್, ಜೀವನ್,ಚಂದನ್,ಸುಹಾನ್ ,ರಿಯನ್,ಸುಖ್ದೇವ್, ಅಲ್ಬಿನ್,ತರುಣ್,ಗೌತಮ್,ಅರ್ಷ್,
ಸಂಜಯ್,ಹೇಮಂತ್, ಮಿಶಬ್ ಹಾಗೂ
ಬಾಲಕಿಯರ ವಿಭಾಗದಲ್ಲಿ ಭವಿಷ್ಯ, ಜಾಸ್ಮಿನ್, ದೀಪ್ತಿ, ಅರುಂಧತಿ, ಚಶ್ಮಿತಾ, ಶಾರ್ಲಿನ್, ಭುವನ, ಸೂಫಿಯಾ, ಧನ್ಯ, ಹೋನಲ್, ಚೈತನ್ಯ ಪಾಲ್ಗೊಂಡಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!