ಕುಶಾಲನಗರ,ಮೇ 04:
ಪಂಚರಾಜ್ಯಗಳ ಚುನಾವಣೆ ಪೈಕಿ ಕಾಂಗ್ರೆಸ್ ಕರ್ನಾಟಕದ ಎರಡು ವಿಧಾನಸಭಾ ಹಾಗೂ ಕೇರಳ ರಾಜ್ಯದಲ್ಲಿ 2/3 ರಷ್ಟು ಬಹುಮತದೊಂದಿಗೆ ಜಯಭೇರಿ ಹಿನ್ನೆಲೆಯಲ್ಲಿ ಕುಶಾಲನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕುಶಾಲನಗರದಲ್ಲಿ ವಿಜಯೋತ್ಸವ ಆಚರಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ.ಶಶಿಧರ್ ನೇತೃತ್ವದಲ್ಲಿ
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಪಕ್ಷದ ಪರ ಘೋಷಣೆ ಮೊಳಗಿಸಿ ಸಂಭ್ರಮಿಸಿದರ.
ರಾಜ್ಯದ ಜನಪರ ಸರಕಾರದ ಅಸಹಾಯಕ ಹಾಗೂ ದುರ್ಬಲ ವರ್ಗದ ಪರವಾದ ಗ್ಯಾರಂಟಿ ಯೋಜನೆಗಳಿಗೆ ಸಿಕ್ಕ ಗೆಲುವಾಗಿದೆ. ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಪರವಾಗಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಸಂದರ್ಭ ಪ್ರಮುಖರಾದ ವಿ.ಎಸ್.ಆನಂದಕುಮಾರ್, ವಿ.ಜೆ.ನವೀನ್, ಅಜೀಜ್, ದಾಮೋದರ್, ಇರ್ಫಾನ್, ಶಶಿ ಭೀಮಯ್ಯ, ಚಂದ್ರು,ಮಹದೇವ, ಚಿರಂಜೀವಿ, ಗಯಾಜ್ ಮತ್ತಿತರರು ಇದ್ದರು.
Back to top button
error: Content is protected !!