ಕುಶಾಲನಗರ, ಮೇ 23: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕೊಡಗಿನ ಹೆಚ್.ಎಸ್.ಚೇತನ್ ಅವರು ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿದ್ದ ಚೇತನ್ ಅವರು ಕಳೆದ ಅವಧಿಯ ಒಂದೂವರೆ ವರ್ಷಗಳ ಕಾಲ ಪ್ರಧಾನ ಕಾರ್ಯದರ್ಶಿ ಹುದ್ದೆ ನಿರ್ವಹಿಸಿದ್ದರು. ಇದೀಗ 2026-31ನೇ ಸಾಲಿಗೆ ನಡೆದ ಚುನಾವಣೆಯಲ್ಲಿ ಮುಂದಿನ 5 ವರ್ಷಗಳ ಅವಧಿಗೆ ಎರಡನೇ ಬಾರಿಗೆ ಪ್ರಧಾನ ಕಾರ್ಯದರ್ಶಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇವರಿಗೆ ಕುಶಾಲನಗರದ ಶ್ರೀ ಸಾಯಿ ಸಿಂಚನ ರೆಸಿಡೆನ್ಸಿ ವತಿಯಿಂದ ಆತ್ಮೀಯ ಶುಭಾಶಯ ಕೋರಲಾಗಿದೆ.
Back to top button
error: Content is protected !!