ಕಾರ್ಯಕ್ರಮ

ಕುಶಾಲನಗರದಲ್ಲಿ ಎಸ್.ಎಲ್.ವಿ.ಬುಕ್ ಹೌಸ್ ಉದ್ಘಾಟನೆ

ಕುಶಾಲನಗರ, ‌ಏ 08: ಕುಶಾಲನಗರದಲ್ಲಿ ನೂತನವಾಗಿ ಆರಂಭಗೊಂಡ ಎಸ್.ಎಲ್.ವಿ.ಬುಕ್ ಹೌಸ್ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.

ಕೆನರಾ ಬ್ಯಾಂಕ್ ಬಳಿ‌ಯ ನೂತನ ಮಳಿಗೆಯನ್ನು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು,‌ನೂತನ ಬುಕ್ ಹೌಸ್ ನಲ್ಲಿ ಶಿಕ್ಷಣಕ್ಕೆ ಪೂರಕವಾದ ಸಮಗ್ರ ಸಾಮಗ್ರಿಗಳ ಭರಪೂರ ಸಂಗ್ರಹವಿದೆ. ಇದರಿಂದ ನೆರೆಯ ಮೈಸೂರು ಮತ್ತಿತರ ಕಡೆಗಳಿಗೆ ತೆರಳುವ ಅನಿವಾರ್ಯತೆ ದೂರವಾಗಿದೆ. ಕುಶಾಲನಗರ ಮಾತ್ರವಲ್ಲದೆ ಜಿಲ್ಲೆಯ ಹಲವೆಡೆ ಇಂತಹ ಮಹಿಳೆ ಸ್ಥಾಪನೆಯಾಗಲಿ ಎಂದು ಶುಭ ಹಾರೈಸಿದರು.

ಶ್ರೀ ಕ್ಷೇತ್ರ ಕಟಿಲಿನ ಪ್ರಧಾನ ಅರ್ಚಕ ಶ್ರೀ ವೆಂಕಟರಮಣ ಅಸ್ರಣ್ಣ ಅವರು ದೀಪ ಪ್ರಜ್ವಲನೆ‌ ಮಾಡಿದರು. ನಂತರ ಮಾತನಾಡಿದ ಅವರು, ಕನಿಷ್ಠ ಲಾಭ ಗರಿಷ್ಠ ಸೇವೆ ಎಂಬ ಧ್ಯೇಯದೊಂದಿಗೆ ಎಸ್.ಎಲ್.ಬಿ.ಬುಕ್ ಹೌಸ್ ಮಾಲೀಕರು ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ಇವರ ಉದ್ಯಮ ಸದಾ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ. ರಾಜ್ಯದ ವಿವಿಧೆಡೆ ಬುಕ್ ಹೌಸ್ ಸ್ಥಾಪನೆ ಮೂಲಕ ನೂರಾರು ಮಂದಿಗೆ ಉದ್ಯೋಗದಾತರಾಗಿದ್ದಾರೆ ಎಂದು ಶ್ಲಾಘಿಸಿದರು.
ಎಸ್.ಎಲ್
ವಿ.ಬುಕ್ ಹೌಸ್
ಮಾಲೀಕರಾದ ದಿವಾಕರ ದಾಸ್ ನೇರ್ಲಾಜೆ ಅವರು ಮಾತನಾಡಿ,‌ ಕುಶಾಲನಗರದ ನಮ್ಮ ನೂತನ ಉದ್ಯಮಕ್ಕೆ ಎಲ್ಲರ‌ ಸಹಕಾರ ಅಗತ್ಯವಿದೆ. ರಿಯಾಯಿತಿ ದರದಲ್ಲಿ ಉತ್ತಮ ಗುಣಮಟ್ಟದ ಕಲಿಕಾ ಸಾಮಗ್ರಿ, ಶಾಲಾ ಪಠ್ಯ ಪುಸ್ತಕ‌ ಮತ್ತಿತರ ವಸ್ತುಗಳು ನಮ್ಮಲ್ಲಿ‌ ದೊರಕುತ್ತದೆ ಎಂದು ತಿಳಿಸಿದರು. ಇದೇ ಸಂದರ್ಭ ಅತಿಥಿಗಳನ್ನು‌ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಎಸ್.ಎಲ್.ವಿ.ಗ್ರೂಪ್ ನ ಹೇಮಾವತಿ ದಿವಾಕರ ದಾಸ್, ರಾಮದಾಸ್ ಶೆಟ್ಟಿ, ಕಟ್ಟಡ ಮಾಲೀಕ‌ ನರೇಂದ್ರನ್, ಗಣ್ಯರಾದ ಶ್ರೀಧರ ಶೆಟ್ಟಿ ಗುಬ್ಯ,ರಾಜರಾಮಶೆಟ್ಟಿ‌ ಕೊಲ್ಪೆ, ಪುತ್ತೂರು ಬಿಜೆಪಿ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು, ಅಳಿಕೆ ಸೇವಾ ಸಹಕಾರ ಸಂಘದ ಅಧ್ಯಕ್ಷ ರೂಪೇಶ್ ರೈ ಅಳಿಕೆ, ರಮೇಶ್ ಆಳ್ವಾ
ಚಂದ್ರಕಾಂತ್ ಬೆಂಗಳೂರು, ಕಾಂಗ್ರೆಸ್ ಮುಖಂಡ ಜಯರಾಂ ಮೈಸೂರು, ಯುವ ಉದ್ಯಮಿಗಳಾದ ತೌಸೀಫ್, ಫಹಾದ್, ಕುಶಾಲನಗರ ತಾಲೂಕು ಗ್ಯಾರೆಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಕೆಪಿಸಿಸಿ ಸದಸ್ಯ ಮಂಜುನಾಥ್ ಗುಂಡುರಾವ್, ಪ್ರಮುಖರಾದ ಯಶ್ ದೋಲ್ಪಾಡಿ, ಪೂರ್ಣಶ್ರೀ ರವೀಂದ್ರ ರೈ ಸೇರಿದಂತೆ ಕುಶಾಲನಗರದ ವಿವಿಧ ಸಂಘಟನೆ, ಸಂಘಸಂಸ್ಥೆಗಳ ಪ್ರಮುಖರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!