ಪ್ರಕಟಣೆ

ತಾ.27 ರಂದು ಕೊಡಗು ವಿವಿ ಯಲ್ಲಿ ರಂಗ ಸಂಗೀತ ಕಾರ್ಯಕ್ರಮ

ಕುಶಾಲನಗರ, ಮಾ 25: ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಹಾಗೂ ಕೊಡಗು ವಿವಿ ವತಿಯಿಂದ ವಿವಿಯ ಸಭಾಂಗಣದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಮಾ 27 ರಂದು ವಿಶೇಷ ಉಪನ್ಯಾಸಕ ಹಾಗೂ ರಂಗ ಸಂಗೀತ ಕಾರ್ಯಕ್ರಮ ಗಳು ಜರುಗಲಿವೆ.
ಅಂದು ಬೆಳಗ್ಗೆ 10 -30 ಕ್ಕೆ ಕೊಡಗು ವಿವಿ ಕುಲಪತಿ ಡಾ.ಅಶೋಕ್ ಸಂಗಪ್ಪ ಆಲೂರ ಕಾರ್ಯಕ್ರಮ ವನ್ನು ಉದ್ಘಾಟಿಸಲಿದ್ದಾರೆ.
ಮೈಸೂರಿನ ರಂಗಾಯಣದ ನಿರ್ದೇಶಕ ಸತೀಶ್ ತಿಪಟೂರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.
ವಿವಿ ಕುಲಸಚಿವ ಡಾ.ಎಂ.ಸುರೇಶ್, ಕರ್ನಾಟಕ ನಾಟಕ ಅಕಾಡೆಮಿ ಸದಸ್ಯೆ ಡಾ.ಜಾಹಿದಾ ಕೊಡಗು, ಕೊಡಗು ಜಿಲ್ಲಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಅಧ್ಯಕ್ಷ ಆವರ್ತಿ ಆರ್.ಮಹದೇವಪ್ಪ ಉಪಸ್ಥಿತಿ ಇರುವರು.
ನೀನಾಸಂ ರಂಗ ನಿರ್ದೇಶಕ ಮಂಜಪ್ಪ ಮಾಲ್ದಾರೆ ಅವರಿಂದ ರಂಗಭೂಮಿ ಎಂಬ ಚಿಕಿತ್ಸಕ ಮಾದರಿ ವಿಷಯದ ಕುರಿತು ಉಪನ್ಯಾಸ ನೀಡಲಿದ್ದಾರೆ.
ಕುಹೂ ಬೆಂಗಳೂರು ತಂಡದವರಿಂದ ರಂಗ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ಕಾರ್ಯಕ್ರಮ ಸಂಘಟಕಿ ಡಾ.ಜಾಹಿದಾ ಕೊಡಗು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!