ಕುಶಾಲನಗರ, ಏ 02: ಬಾರವಿ ಕಾವೇರಿ ಕನ್ನಡ ಸಂಘದ ವತಿಯಿಂದ ಕಾವೇರಿ ಹುಣ್ಣಿಮೆ ಅಂಗವಾಗಿ ಕೊಡಗು-ಮೈಸೂರು ಗಡಿ ಕಾವೇರಿ ಸೇತುವೆ ಬಳಿಯ ಕಾವೇರಿ ಕ್ಷೇತ್ರದಲ್ಲಿ 157ನೇ ಹುಣ್ಣಿಮೆ ಪೂಜಾ ಕೈಂಕರ್ಯ ಜರುಗಿತು.
ಅರ್ಚಕ ಪುರುಷೋತ್ತಮ ಭಟ್ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಕಾವೇರಿ ಮಾತೆಗೆ ಅಲಂಕಾರ ಮಾಡಿ
ಮಹಾಮಂಗಳಾರತಿ ಬಳಿಕ ನೆರೆದಿದ್ದ ಭಕ್ತರಿಗೆ ಪ್ರಸಾದ, ಅನ್ನಸಂತರ್ಪಣೆ ನೆರವೇರಿಸಲಾಯಿತು.
ಪಿರಿಯಾಪಟ್ಟಣದ ವಿನೋದ್ ಪಿ.ಎನ್.ಪೂಜಾ ಸೇವಾರ್ಥ ನೆರವೇರಿಸಿದರು. ಬೆಂಗಳೂರಿನ ಸುನಂದ ಕೌಶಿಕ್ ಪೂಜೆಗೆ ವಸ್ತ್ರದಾನ ಮಾಡಿದರು. ಮೈಮುಲ್ ಮಾಜಿ ಅಧ್ಯಕ್ಷ ಪಿ.ಎಂ.ಪ್ರಸನ್ನ ಮತ್ತು ಸಂಗಡಿಗರು ಪೂಜೆಯಲ್ಲಿ ಪಾಲ್ಗೊಂಡಿದ್ದರು.
ಬಾರವಿ ಕಾವೇರಿ ಕನ್ನಡ ಸಂಘದ ಬಬೀಂದ್ರ ಪ್ರಸಾದ್, ರವೀಂದ್ರ ಪ್ರಸಾದ್, ವಿಜಯೇಂದ್ರ ಪ್ರಸಾದ್,
ಸೋಮಶೇಖರ್ ತಿಲಕ್ ಪೂಜಾರಿ
ಮಂಜಣ್ಣ ಆವರ್ತಿ, ಕೊಪ್ಪ ಚಂದ್ರು, ವೆಂಕಪ್ಪ, ರವಿ, ರುದ್ರ ಮತ್ತಿತರರು ಇದ್ದರು.
Back to top button
error: Content is protected !!