ಕುಶಾಲನಗರ, ಜೂ. 18: ರಾಷ್ಟ್ರ ಮಟ್ಟದ ಅಂತರ ಸೈನಿಕ ಶಾಲೆಗಳ ಪುಟ್ಬಾಲ್ ಪಂದ್ಯಾವಳಿಯಲ್ಲಿ ಕೂಡಿಗೆಯ ಕೊಡಗು ಸೈನಿಕ ಶಾಲೆಯ ಜೂನಿಯರ್ ತಂಡವು ದ್ವಿತೀಯ ಸ್ಥಾನವನ್ನು ಪಡೆದು ಪ್ರಶಸ್ತಿ ಹಾಗೂ ಟ್ರೋಫಿಯನ್ನು ತನ್ನಾದಾಗಿಸಿಕೊಂಡಿದೆ.
ಒರಿಸ್ಸಾ ರಾಜ್ಯದ ಭುವನೇಶ್ವರಿ ಪುಟ್ಬಾಲ್ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಪುಟ್ಬಾಲ್ ಪಂದ್ಯದಲ್ಲಿ ಸೈನಿಕ ಶಾಲೆಯ ಜೂನಿಯರ್ ವಿಭಾಗದ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಪಡೆದು ಜಿಲ್ಲೆಗೆ ಮತ್ತು ಶಾಲೆಗೆ ಕೀರ್ತಿ ತಂದಿದ್ದಾರೆ. ಕ್ರೀಡಾಕೂಟದಿಂದ ಮರಳಿದ ವಿಜೇತರನ್ನು ಕೂಡಿಗೆ ಅಂಜಲಾ ವಿದ್ಯಾನೀಕೆತನ ಶಾಲೆಯ ಮುಂಭಾಗದಿಂದ ಕೂಡಿಗೆಯ ಪ್ರಮುಖ ಬೀದಿಗಳಲ್ಲಿ ಹೂ ಗಳಿಂದ ಅಲಂಕಾರಗೊಂಡ ವಾಹನದ ಮೂಲಕ ವಿಜಯೋತ್ಸವದ ಮೆರವಣಿಗೆ ನಡೆಸಿ ಸೈನಿಕ ಶಾಲೆಗೆ ಕರೆತರಲಾಯಿತು.
ದಕ್ಷಿಣ ಭಾರತ ಸೈನಿಕ ಶಾಲಾ ವಿಭಾಗದಲ್ಲಿ ಭಾಗವಹಿಸಿ ಅಲ್ಲಿ ವಿಜೇತರಾಗಿ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಗೊಂಡಿದ್ದರು.
ವಿಜಯೋತ್ಸವದ ಮೆರವಣಿಗೆಗೆ ಚಾಲನೆಯನ್ನು ಕೊಡಗು ಸೈನಿಕ ಶಾಲೆ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್ ವಿದ್ಯಾರ್ಥಿಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿದರು.
ಪುಟ್ಬಾಲ್ ಪಂದ್ಯಾವಳಿಯಲ್ಲಿ ಕೊಡಗು ಸೈನಿಕ ಶಾಲೆಯ ಜೂನಿಯರ್, ಸಬ್ ಜೂನಿಯರ್, ಮತ್ತು ಬಾಲಕಿಯರ ತಂಡಗಳಾಗಿ ಒಟ್ಟು 48 ವಿದ್ಯಾರ್ಥಿಗಳು 3 ತಂಡವಾಗಿ ಭಾಗವಹಿಸಿದ್ದರು.
ಇದರಲ್ಲಿ ಬಾಲಕರ ಜೂನಿಯರ್ ತಂಡವು ರಾಷ್ಟ್ರ ಮಟ್ಟದ ಸೈನಿಕ ಶಾಲೆ ವಿಭಾಗದಲ್ಲಿ ಇದೇ ಪ್ರಥಮ ಬಾರಿಗೆ ದ್ವಿತೀಯ ಸ್ಥಾನವನ್ನು ಗಳಿಸಿ ಪಂದ್ಯಾವಳಿಯಲ್ಲಿ ಪ್ರಶಸ್ತಿ ಮತ್ತು ಟ್ರೋಫಿ ಯನ್ನು ತನ್ನಾದಗಿಸಿಕೊಂಡಿದೆ.
ತಂಡದ ತರಬೇತುದಾರರಾಗಿ ಶೇಖ್ಅಜೀಜ್ ನವರು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು.
ಮೆರವಣಿಗೆಯ ಸಂದರ್ಭದಲ್ಲಿ ಶಾಲೆಯ 600 ವಿದ್ಯಾರ್ಥಿಗಳು, ಉಪ ಪ್ರಾಂಶುಪಾಲ ಸೇರಿದಂತೆ ಉಪನ್ಯಾಸಕ ವೃಂದ, ಭೋದಕ ವರ್ಗ, ಹಾಗೂ ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಮೆರವಣಿಗೆಯ ಸಂದರ್ಭದಲ್ಲಿ ಕೂಡಿಗೆ ಸಾರ್ವಜನಿಕರು, ಅಂಗಡಿ ಮಾಲೀಕರು ವಿದ್ಯಾರ್ಥಿಗಳ ಸಾಧನೆಯನ್ನು ಗುರುತಿಸಿ ವಿಜಯೋತ್ಸವದ ಸಂದರ್ಭದಲ್ಲಿ ಅಲಂಕಾರದ ವಾಹನದಲ್ಲಿದ್ದ ವಿದ್ಯಾರ್ಥಿಗಳಿಗೆ ಹೂಮಾಲೆಗಳನ್ನು ಹಾಕಿ ಗೌರವಿಸಿದರು.
Back to top button
error: Content is protected !!